ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಕೂದಲು ಉದುರುತ್ತಿವೆ ಎಂಬ ಖಿನ್ನತೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಮದುರೈನಲ್ಲಿ ನಡೆದಿದೆ.

ಮಧುರೈ: ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಕೂದಲು ಉದುರುತ್ತಿವೆ ಎಂಬ ಖಿನ್ನತೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಮದುರೈನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚರ್ಮ ಸಮಸ್ಯೆಯಿಂದ ತಲೆ ಕೂದಲು ಉದುರುತ್ತಿವೆ ಎಂಬ ಕಾರಣಕ್ಕೆ ಹಲವು ವೈದ್ಯಕೀಯ ಚಿಕಿತ್ಸೆಗಳನ್ನು ಸಂತ್ರಸ್ತ ಆರ್.ಮಿಥುನ್ ರಾಜ್(27) ಪಡೆದಿದ್ದರು. ಈ ನಡುವೆ ಮನೆಯಲ್ಲಿ ಈತನಿಗೆ ವಿವಾಹಕ್ಕೆ ಹುಡುಗಿ ಹುಡುಕಲಾಗುತ್ತಿತ್ತು.

ಆದರೆ ತಲೆಕೂದಲು ಉದುರುವ ಸಮಸ್ಯೆ ನಿಲ್ಲದ ಕಾರಣ ಮಿಥುನ್ ಬೇಸತ್ತಿದ್ದರು. ಈ ಸಂಬಂಧಖಿನ್ನತೆಗೊಳಗಾಗಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಿಥುನ್ ಕಳೆದ ವರ್ಷ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.