Asianet Suvarna News Asianet Suvarna News

ಪ್ರಧಾನಿ ಮೋದಿ, ಮಾಳಾವಿಕಗೆ ಸ್ಯಾನಿಟರಿ ಪ್ಯಾಡ್ ರವಾನಿಸಿದ ಬೆಂಗಳೂರು ವಿದ್ಯಾರ್ಥಿನಿಯರು

ಸ್ಯಾನಿಟರಿ ಪ್ಯಾಡ್ ಮೇಲೆ ಭಾರಿ ತೆರಿಗೆ ವಿಧಿಸಿರುವ  ಕೇಂದ್ರ ಸರ್ಕಾರದ  ಕ್ರಮ ಖಂಡಿಸಿ ಎನ್’ಎಸ್’ಯುಐ ಹಾಗೂ ಬಿಎಂಎಸ್ ಕಾಲೇಜು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ಹಾಗೂ ರಾಜ್ಯ ಬಿಜೆಪಿ ವಕ್ತಾರೆ ಮಾಳಾವಿಕ ಅವರಿಗೆ ಅಂಚೆ ಮೂಲಕ ಸ್ಯಾನಿಟರಿ ಪ್ಯಾಡ್’ಗಳನ್ನು ಕಳುಹಿಸಿದ್ದಾರೆ.

Bengaluru Students Send Sanitary Pad to PM Modi
  • Facebook
  • Twitter
  • Whatsapp

ಬೆಂಗಳೂರು: ಸ್ಯಾನಿಟರಿ ಪ್ಯಾಡ್ ಮೇಲೆ ಭಾರಿ ತೆರಿಗೆ ವಿಧಿಸಿರುವ  ಕೇಂದ್ರ ಸರ್ಕಾರದ  ಕ್ರಮ ಖಂಡಿಸಿ ಎನ್’ಎಸ್’ಯುಐ ಹಾಗೂ ಬಿಎಂಎಸ್ ಕಾಲೇಜು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ಹಾಗೂ ರಾಜ್ಯ ಬಿಜೆಪಿ ವಕ್ತಾರೆ ಮಾಳಾವಿಕ ಅವರಿಗೆ ಅಂಚೆ ಮೂಲಕ ಸ್ಯಾನಿಟರಿ ಪ್ಯಾಡ್’ಗಳನ್ನು ಕಳುಹಿಸಿದ್ದಾರೆ.

ಜಿಎಸ್ಟಿ ಅಡಿ ಸ್ಯಾನಿಟರಿ ಪ್ಯಾಡ್’ಗೆ ಶೇ. 12 ತೆರಿಗೆ ವಿಧಿಸಲಾಗಿದೆ. ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ದೇಶಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ, ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜು ಬಳಿ ಎನ್’ಎಸ್’ಯುಐ ವಿದ್ಯಾರ್ಥಿನಿಯರ ಘಟಕವು ‘ಅಂಚೆ ಪ್ರತಿಭಟನೆ’ ನಡೆಸಿ ಆಕ್ರೊಶ ವ್ಯಕ್ತಪಡಿಸಿದೆ.

Bengaluru Students Send Sanitary Pad to PM Modi

Bengaluru Students Send Sanitary Pad to PM Modi

ಗುರುವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು, ಮಹಿಳೆಯರ ಮುಟ್ಟಿಗೆ ತೆರಿಗೆ ಹಾಕುವ ಮೂಲಕ ಕೇಂದ್ರ ಸರ್ಕಾರ ಕೀಳಾಗಿ ನಡೆದುಕೊಂಡಿದೆ. ಮಹಿಳೆಯರು ಪ್ರತಿ ತಿಂಗಳು ಅನುಭವಿಸುತ್ತಿದ್ದ ಕಿರುಕುಳಕ್ಕೆ ವರವಾಗಿ ಸ್ಯಾನಿಟರಿ ಪ್ಯಾಡ್ ಬಂದಿದೆ. ದೇಶದ ಅರ್ಧದಷ್ಟು ಜನಸಂಖ್ಯೆಗೆ ನ್ಯಾಪ್’ಕಿನ್ ಬೇಕು. ಆದರೆ, ಸ್ಯಾನಿಟರಿ ಪ್ಯಾಡ್ ದುಬಾರಿಯಿಂದಾಗಿ ಶೇ. 70 ಮಂದಿಗೆ ಪ್ಯಾಡ್ ಖರೀದಿಸಲೂ ಸಾಧ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶೇ. 12 ತೆರಿಗೆ ಹಾಕುವ ಮೂಲಕ ಮತ್ತಷ್ಟು ತುಟ್ಟಿ ಮಾಡಿ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಕೂಡಲೇ ಸ್ಯಾನಿಟರಿ ಪ್ಯಾಡ್ ಮೇಲಿನ ತೆರಿಗೆ ಹಿಂಪಡೆಯಬೇಕೆಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios