ಬೆಂಗಳೂರಿನ ಸತೀಶ್, ೫೦ ಕೋಟಿ ರೂ. ಬೆಲೆಯ ವಿದೇಶಿ ತೋಳ-ನಾಯಿ ಖರೀದಿಸಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದ. ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ, ಬಾಡಿಗೆ ನಾಯಿಗಳಿಂದ ವಿಡಿಯೋ ಮಾಡಿ, ಸುಳ್ಳು ಪ್ರಚಾರ ಪಡೆದಿದ್ದು ಬಯಲಾಗಿದೆ. ಇಡಿ ದಾಳಿಯಲ್ಲಿ ವಂಚನೆ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಾಗಿದೆ.

ಬೆಂಗಳೂರು (ಏ.17): ಉದ್ಯಾನನಗರಿಯ ಉತ್ಸಾಹಿ ಶ್ವಾನ ಪ್ರೇಮಿ ಎಸ್‌.ಸತೀಶ್‌ ಬಗ್ಗೆ ಗೊತ್ತಿರಬಹುದು. ಕಳೆದ ತಿಂಗಳು ಎಷ್ಟು ದೊಡ್ಡ ಸುದ್ದಿ ಮಾಡಿದ್ದ ಎಂದರೆ, 50 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ವೂಲ್ಫ್‌ ಡಾಗ್‌ಅನ್ನು ಖರೀದಿ ಮಾಡಿದ್ದೆ ಎಂದು ಎಲ್ಲರಿಗೂ ತಿಳಿಸಿದ್ದ. ಮಾಧ್ಯಮಗಳಲ್ಲೂ ಈ ವಿಚಾರ ಸಖತ್‌ ಸುದ್ದಿಯಾಗಿ ವೈರಲ್‌ ಆಗಿತ್ತು.


ಕಾಡು ತೋಳ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಗಳ ಮಿಶ್ರಣವಾಗಿದ್ದ ಕಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ಅಪರೂಪದ ನಾಯಿಯನ್ನು ಖರೀದಿಸಲು ಸುಮಾರು ರೂ.50 ಕೋಟಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದ. ಈಗ ಈತನ ಬಂಡವಾಳವನ್ನು ಜಾರಿ ನಿರ್ದೇಶನಲಾಯಲದ ಅಧಿಕಾರಿಗಳು ಬಯಲು ಮಾಡಿದ್ದಾರೆ. 

ವಿಚಾರ ಏನೆಂದರೆ, ಈತ ಹೇಳಿದ್ದು ಬರೀ ಸುಳ್ಳು.'ಬೇರೆಯವರಿಂದ ನಾಯಿಗಳನ್ನ ಬಾಡಿಗೆ ಪಡೆದು ಸತೀಶ್‌ ವಿಡಿಯೋ ಮಾಡಿಕೊಳ್ಳುತ್ತಿದ್ದ. ಕೋಟ್ಯಾಂತರ ರೂಪಾಯಿ ಗೆ ವಿದೇಶಿ ನಾಯಿ ಖರೀದಿ ಎಂದು ಹೇಳಿಕೊಳ್ಳುತ್ತಿದ್ದ. ಆತನ ವ್ಯವಹಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾಗ ಇಡೀ ವ್ಯವಹಾರ ಬಯಲಾಗಿದೆ.

ಇಡಿ ದಾಳಿ ವೇಳೆ ಆತನೊಬ್ಬ ವಂಚಕ ಹಾಗೂ ಸುಳ್ಳು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋದು ಬೆಳಕಿಗೆ ಬಂದಿದೆ. '50 ಕೋಟಿ ನಾಯಿ ಖರೀದಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ ಸತೀಶ್‌ ಮನೆಯ ಮೇಲೆ ಇಡಿ ದಾಳಿ ಮಾಡಿದೆ. ಇದೇ ವಿಚಾರವಾಗಿ ಸತೀಶ್ ವಿರುದ್ಧ ಇಡಿ ಪ್ರಕರಣವನ್ನೂ ದಾಖಲಿಸಿಕೊಂಡಿತ್ತು.

ಜಗತ್ತಿನ ಅತ್ಯಂತ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ವ್ಯಕ್ತಿ; ಬೆಲೆ ಎಷ್ಟು?

ಸತೀಶ್ ಮನೆಯ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆಯನ್ನೂ ಇಡಿ ಮಾಡಿದೆ. ಪರಿಶೀಲನೆ ವೇಳೆ ನಾಯಿಯ ಬೆಲೆ ಸುಳ್ಳು ಎಂಬುದು ಪತ್ತೆಯಾಗಿದೆ. ಈಗಲೂ ಕೂಡ ಸತೀಶ್‌ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ಇತ ಒಬ್ಬ ವಂಚಕ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.ಯಾವುದೇ ನಾಯಿಗಳನ್ನ ವಿದೇಶದಿಂದ ತರಿಸದೇ ಸ್ವದೇಶಿ ನಾಯಿಗಳನ್ನ ವಿದೇಶಿ ಎಂದು ಬಿಂಬಿಸುತ್ತಿದ್ದ. ಸುಳ್ಳು ಮಾಹಿತಿ ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಎನ್ನಲಾಗಿದೆ.

ನಾಯಿ ಜೊತೆ ಮಗುವಿಗೆ ಮದುವೆ! ಕುಟುಂಬಸ್ಥರ ಕಾರಣ ತಿಳಿದ್ರೆ ಬೆಚ್ಚಿ ಬೀಳ್ತೀರಿ!

ಯಾರು ಈ ಎಸ್. ಸತೀಶ್?: ಶ್ವಾನ ಪ್ರೇಮಿ ಎಂದು ಹೇಳಿಕೊಂಡಿದ್ದ ಎಸ್. ಸತೀಶ್, ಭಾರತೀಯ ನಾಯಿ ಸಾಕುವವರ ಸಂಘದ ಅಧ್ಯಕ್ಷರಾಗಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿಗಳನ್ನು ಸಾಕುವುದನ್ನು ನಿಲ್ಲಿಸಿದ್ದರೂ, ಸತೀಶ್ ತಮ್ಮ ಅಪರೂಪದ ನಾಯಿಗಳನ್ನು ಪ್ರಾಣಿ ಪ್ರಿಯರಿಗೆ ಉಡುಗೊರೆಯಾಗಿ ನೀಡುವ ಮೂಲಕ ಹಣ ಸಂಪಾದಿಸುತ್ತಾರೆ ಎಂದಿದ್ದರು. 30 ನಿಮಿಷಗಳ ಕಾರ್ಯಕ್ರಮಕ್ಕೆ 2,200 ಪೌಂಡ್‌ಗಳು (ರೂ. 2,46,705) ಸಿಗುತ್ತದೆ ಮತ್ತು ಐದು ಗಂಟೆಗಳ ಕಾರ್ಯಕ್ರಮಕ್ಕೆ 9,000 ಪೌಂಡ್‌ಗಳು (ರೂ. 10,09,251) ಸಂಪಾದಿಸುತ್ತೇನೆ ಎಂದು ಪುಂಗಿ ಬಿಟ್ಟಿದ್ದ.

ವುಲ್ಫ್‌ಡಾಗ್ ಖರೀದಿಸಿದ ಬಗ್ಗೆ ಹೇಳಿರುವ ಸತೀಶ್, "ಈ ನಾಯಿ ಅಪರೂಪವಾದ್ದರಿಂದ ನಾನು ಅದಕ್ಕಾಗಿ ಹಣ ಖರ್ಚು ಮಾಡಿದ್ದೇನೆ" ಎನ್ನುತ್ತಾರೆ. "ನನಗೆ ಸಾಕಷ್ಟು ಹಣ ಸಿಗುತ್ತದೆ. ಜನರು ಯಾವಾಗಲೂ ನಾಯಿಗಳನ್ನು ನೋಡಲು ಉತ್ಸುಕರಾಗಿರುತ್ತಾರೆ. ಅವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಒಂದು ಸಿನಿಮಾ ನಟನಿಗಿಂತಲೂ ನಾನೂ ಮತ್ತು ನನ್ನ ನಾಯಿಯೂ ಹೆಚ್ಚು ಗಮನ ಸೆಳೆಯುತ್ತೇವೆ" ಎದಿದ್ದ.

ನಾಯಿಯನ್ನು ಏಳು ಎಕರೆ ವಿಸ್ತೀರ್ಣದ ದೊಡ್ಡ ಬಂಗಲೆಯಲ್ಲಿ ಸಾಕುತ್ತಿದ್ದೇನ. ಆ ಮನೆಯಲ್ಲಿ ಇತರ ನಾಯಿ ತಳಿಗಳೂ ವಾಸಿಸುತ್ತಿವೆ. ತಮ್ಮ ಸಾಕುಪ್ರಾಣಿಗಳ ರಕ್ಷಣೆಗಾಗಿ, ಅವರು ತಮ್ಮ ಮನೆಯ ಸುತ್ತಲೂ 10 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಿದ್ದೇನೆ ಎಂದಿದ್ದರು. 24/7 ಗಂಟೆಗಳೂ ಕಾರ್ಯನಿರ್ವಹಿಸುವ ಸಿಸಿಟಿವಿ ಕಣ್ಗಾವಲನ್ನೂ ಇಟ್ಟಿದ್ದಾಗಿ ತಿಳಿಸಿದ್ದ.