ಆನೇಕಲ್‌ :  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರ ಆಶೀರ್ವಾದ ದೊರೆತಿರುವುದು ನನ್ನ ಸುದೈವ. ಕ್ಷೇತ್ರದ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡುತ್ತೇನೆ. ಈ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರ ಋುಣ ಸಂದಾಯ ಮಾಡುವೆ ಎಂದು ನೂತನ ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರೊಡನೆ ವಿಜಯ ಯಾತ್ರೆ ನಡೆಸಿದರು.

ಜಯೋತ್ಸವ ಪ್ರಾರಂಭವಾದ ಸ್ವಲ್ಪ ಹೊತ್ತಿಗೆ ಮಳೆರಾಯನ ಆರ್ಭಟ ಶುರುವಾಯಿತು. ಆಗ ಸಂಸದ ಸುರೇಶ್‌ ಮತ್ತು ಶಾಸಕ ಬಿ.ಶಿವಣ್ಣ ಸಮೀಪದ ಆನೇಕಲ್‌ನ ರಾಘವೇಂದ್ರ ಭವನದಲ್ಲಿ ಆಶ್ರಯ ಪಡೆದರು. ಅಲ್ಲಿನ ವಿಶಿಷ್ಠ ರುಚಿಯ ದೋಸೆ ಮತ್ತು ಕಾಫಿಯನ್ನು ಸವಿದು ಮಾಲಿಕ ರಾಮದಾಸ್‌ರನ್ನು ಅಭಿನಂದಿಸಿದರು. ಹಾಗೆಯೇ ಕನಕಪುರದ ವಾಸು ಹೋಟಲ್‌ ದೋಸೆಯೂ ಚೆನ್ನಾಗಿರುತ್ತದೆ ಎಂದರು.