ಬೆಂಗಳೂರು : ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ತಾಪಮಾನ ಇಳಿಕೆ ಯಾಗಿದೆ. ಮಂಗಳವಾರ 36 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದ್ದ ಗರಿಷ್ಠ ತಾಪಮಾನ ಬುಧವಾರ 33 ರಿಂದ 34 ಡಿ.ಸೆ.ವರೆಗೆ ಇಳಿಕೆ ಯಾಗಿದೆ. ಇನ್ನೂ ಕೆಲ ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರದ ಬಹುಭಾಗಗಳಲ್ಲಿ ಬುಧವಾರ ಸುರಿದ ಧಾರಾಕಾರ ಗಾಳಿ ಮಳೆಗೆ 90 ವಿದ್ಯುತ್ ಕಂಬ ಹಾಗೂ 8 ಮರಗಳೂ ಸೇರಿದಂತೆ 45ಕ್ಕೂ ಹೆಚ್ಚು ಮರದ ಕೊಂಬೆಗಳು ನೆಲಕಚ್ಚಿವೆ. ವಿದ್ಯಾರಣ್ಯಪುರದಲ್ಲಿ ಬೃಹತ್ ಗಾತ್ರದ ಮರ ಮನೆಯೊಂದರ ಮೇಲೆ ಬಿದ್ದು ಚಾವಣಿ ಮತ್ತು ಕಾಂಪೌಂಡ್ ಹಾನಿಗೀಡಾಗಿದೆ. ಇದೇ ರೀತಿ ಬೆಂಗಳೂರಿನಲ್ಲಿ ಬುಧವಾರ ಸುರಿದ ಮಳೆಯು ಭಾರೀ ಅನಾಹುತವನ್ನು ಸೃಷ್ಟಿಸಿದೆ.