ವರನಟ ಡಾ. ರಾಜ್ ಹಾಗೂ ಸಾಹಸಸಿಂಹ ಡಾ.ವಿಷ್ಣು ನಿಧನದ ಬಳಿಕ ಘಟಿಸಿದ್ದ ಅಹಿತಕರ ಘಟನೆಗಳ ಕಹಿನೆನಪು ಒಂದೆಡೆ; ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್‌ರ ನಿಧನ ಇನ್ನೊಂದೆಡೆ. ಈ ನಡುವೆ ಕಾನೂನು & ಸುವ್ಯವಸ್ಥೆಯನ್ನು ನಿಭಾಯಿಸುವ ಭಾರೀ ದೊಡ್ಡ ಜವಾಬ್ದಾರಿ ಬೆಂಗಳೂರು ಪೊಲೀಸರದ್ದಾಗಿತ್ತು.

ಸುವರ್ಣನ್ಯೂಸ್ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರು, ಕಳೆದ ಮೂರು ದಿನಗಳಲ್ಲಿದ್ದ ಒತ್ತಡ, ನಿರ್ಧಾರ ತೆಗೆದುಕೊಳ್ಳುವ ಸವಾಲು, ಸಿಬ್ಬಂದಿ ನಿಯೋಜನೆ ಮುಂತಾದ ಕ್ಲಿಷ್ಟಕರ ವಿಚಾರಗಳನ್ನು ಹೇಗೆ ಪ್ಲಾನ್ ಮಾಡಿದೆವು, ಮತ್ತು ಅದನ್ನು ಹೇಗೆ ನಿರ್ವಹಿಸಿದೆವು ಎಂಬುವುದನ್ನು ಹಂಚಿಕೊಂಡಿದ್ದಾರೆ.

"

"