ಕಂಠಪೂರ್ತಿ ಕುಡಿದು ಬೈಕ್‌ ಕಾರುಗಳಲ್ಲಿ ಹೋಗುತ್ತಿದ್ದವರ ತಪಾಸಣೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದಷ್ಟು ಜನರನ್ನು ಬಲೆಗೆ ಬೀಳಿಸಿದರು.
ಬೆಂಗಳೂರು (ಜ.01): ಬೆಂಗಳೂರಿನಲ್ಲಿ ಜನರು ಒಂದೆಡೆ ಹೊಸ ವರ್ಷವನ್ನು ಸ್ವಾಗತಿಸಿ ಭರ್ಜರಿಯಾಗಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ರೆ, ಮತ್ತೊಂದು ಕಡೆ ಪಾರ್ಟಿಯಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಮನೆಗೆ ಹೋಗುತ್ತಿದ್ದವರಿಗೆ ಪೊಲೀಸರು ಸಖತ್ ಆಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ.
ನ್ಯೂ ಇಯರ್ ಎಂದು ರಾತ್ರಿ ಇಡೀ ಪಾರ್ಟಿ ಮಾಡಿ ಕುಡಿದು ಮನೆಗೆ ಹೊರಟಿದ್ದ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿ ಬಿಸಿ ಮುಟ್ಟಿಸಿದರು.
ಕಂಠಪೂರ್ತಿ ಕುಡಿದು ಬೈಕ್ ಕಾರುಗಳಲ್ಲಿ ಹೋಗುತ್ತಿದ್ದವರ ತಪಾಸಣೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದಷ್ಟು ಜನರನ್ನು ಬಲೆಗೆ ಬೀಳಿಸಿದರು.
ನ್ಯೂ ಇಯರ್ ಮೂಡ್ನಲ್ಲಿ ಕುಡಿದು ವಾಹನ ಚಾಲನೆ ಮಾಡಿದವರು ನಂತರ ಪೊಲೀಸರ ತಪಾಸಣೆ ವೇಳೆ ಕೈ ಕೈ ಹಿಸುಕಿಕೊಂಡು ಗೊಗರೆಯುತ್ತಿದ್ದರು.
ನ್ಯೂ ಇಯರ್ ಪಾರ್ಟಿಗಳಿಗೆ ಎರಡು ಗಂಟೆಯವರೆಗೆ ಕಾಲಾವಕಾಶ ನೀಡಿದ್ದ ಪೊಲೀಸರು ನಂತ್ರ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡಲು ಮುಂದಾಗಿ 250ಕ್ಕೂ ಹೆಚ್ಚು ಕೇಸ್'ಗಳನ್ನು ಜಡಿದಿದ್ದಾರೆ.
ನಗರದ ಸಿಟಿ ಮಾರ್ಕೆಟ್, ಸಿಟಿ ರೈಲು ನಿಲ್ದಾಣ, ಲಾಲ್ಬಾಗ್, ಮಲ್ಲೇಶ್ವರಂ, ಮಿನರ್ವ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ತಪಾಸಣೆ ನಡೆಸಿ ದೂರುಗಳನ್ನು ದಾಖಲಿಸಿದ್ದಾರೆ.
