ಆನ್​ಲೈನ್​ ಮಾರಾಟದ ನೆಪದಲ್ಲಿ ಬ್ಯಾಂಕ್​ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ತಂಡ ಬೆಂಗಳೂರು ಸೈಬರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.ಪೇಮಾಜ ಡಾಟ್​ ಕಾಮ್​ ಹೆಸರಿನ ವೆಬ್​ಸೈಟ್​ನಲ್ಲಿ ಕಡಿಮೆ ಬೆಲೆಗೆ ಗೃಹಪಯೋಗಿ ವಸ್ತುಗಳನ್ನು ಮಾರುವುದಾಗಿ ಖದೀಮರು ಗ್ರಾಹಕರಿಗೆ ಆಫರ್​ ನೀಡುತ್ತಿದ್ದರು.

ಬೆಂಗಳೂರು: ಆನ್​ಲೈನ್​ ಮಾರಾಟದ ನೆಪದಲ್ಲಿ ಬ್ಯಾಂಕ್​ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ತಂಡ ಬೆಂಗಳೂರು ಸೈಬರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.

ಪೇಮಾಜ ಡಾಟ್​ ಕಾಮ್​ ಹೆಸರಿನ ವೆಬ್​ಸೈಟ್​ನಲ್ಲಿ ಕಡಿಮೆ ಬೆಲೆಗೆ ಗೃಹಪಯೋಗಿ ವಸ್ತುಗಳನ್ನು ಮಾರುವುದಾಗಿ ಖದೀಮರು ಗ್ರಾಹಕರಿಗೆ ಆಫರ್​ ನೀಡುತ್ತಿದ್ದರು.

ವೆಬ್​ಸೈಟ್​ನಲ್ಲಿ ಕೊಳ್ಳಲು ಮುಂದಾದ ಗ್ರಾಹಕರ ಬ್ಯಾಂಕ್​ ಖಾತೆ ವಿವರಗಳಿಗೆ ಕನ್ನ ಹಾಕಿ ತಮ್ಮ ಅಕೌಂಟ್’​ಗೆ ಹಣ ಟ್ರಾನ್ಸ್​’ಫರ್​ ಮಾಡಿಕೊಳ್ಳುತ್ತಿದ್ದರು.

ಜೆಪಿನಗರದ ಬ್ಯಾಂಕ್​’ವೊಂದರಲ್ಲಿರುವ ಅಜಯ್ ಸಿಂಗ್ ಎಂಬ ಹೆಸರಿನ ಅಕೌಂಟ್​ಗೆ ಹಣ ಬೀಳುವಂತೆ ಮಾಡುತ್ತಿದ್ದರು.

ಬಂಧಿತ ನಾಲ್ವರು ಪಾಟ್ನಾ, ಬಿಹಾರ ಮೂಲದವರು. ಐಷಾರಾಮಿ ಜೀವನಕ್ಕಾಗಿ ಹೀಗೆ ಆನ್​ಲೈನ್​ ಮೋಸಕ್ಕೆ ಇಳಿದಿದ್ದರು ಎಂದು ತಿಳಿದು ಬಂದಿದೆ.