ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಸಮಾವೇಶ ಫೆ.4ಕ್ಕೆ ಮುಂದೂಡಿಕೆ

First Published 13, Jan 2018, 8:45 AM IST
Bengaluru PM Rally Postpone
Highlights

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದೇ ತಿಂಗಳ 28ರಂದು ನಗರದಲ್ಲಿ ನಡೆಯಬೇಕಿದ್ದ ಬಿಜೆಪಿ ಸಮಾವೇಶ ಫೆ.4ರಂದು ನಿಗದಿಯಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಯಾತ್ರೆ ಆರಂಭವಾಗುವ ಮೊದಲೇ ನಿರ್ಧರಿಸಲಾಗಿತ್ತು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದೇ ತಿಂಗಳ 28ರಂದು ನಗರದಲ್ಲಿ ನಡೆಯಬೇಕಿದ್ದ ಬಿಜೆಪಿ ಸಮಾವೇಶ ಫೆ.4ರಂದು ನಿಗದಿಯಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಯಾತ್ರೆ ಆರಂಭವಾಗುವ ಮೊದಲೇ ನಿರ್ಧರಿಸಲಾಗಿತ್ತು.

ಆದರೆ, ಫೆ.1ರಂದು ಬಜೆಟ್ ಮಂಡನೆ ಆಗಬೇಕಾಗಿರುವುದರಿಂದ ಅದರ ಸಿದ್ಧತೆಗಳ ಹಿನ್ನೆಲೆಯಲ್ಲಿ 28ರ ಭೇಟಿ ಮುಂದೂಡಲಾಗಿದೆ. ಫೆ.4ರಂದು ಭಾನುವಾರ ಯಾತ್ರೆಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಅಂದು ಮೋದಿ ಅವರು ಆಗಮಿಸಲಿದ್ದಾರೆ.

loader