ಒಂದನೇ ಟರ್ಮ್‌ನಲ್ಲಿ ಕೇಂದ್ರ ಮಂತ್ರಿಯಾದರೂ ನಿರ್ಲಿಪ್ತರಾಗಿದ್ದ ಸದಾನಂದ ಗೌಡರು ಎರಡನೇ ಬಾರಿ ಮಂತ್ರಿಯಾದ ಮೇಲೆ ಫುಲ್ ಸ್ಪೀಡ್‌ನಲ್ಲಿದ್ದಾರೆ.

ಆರ್‌ಎಸ್‌ಎಸ್‌ನಿಂದ ದೂರ; ಸಂಕಷ್ಟದಲ್ಲಿ ರಾಜಸ್ಥಾನದ ರಾಣಿ

ಬೆಳಿಗ್ಗೆ ಮನೆ, ಮಧ್ಯಾಹ್ನ ಪಾರ್ಲಿಮೆಂಟ್‌ ಕಚೇರಿ, ಸಂಜೆ ಶಾಸ್ತ್ರಿ ಭವನದಲ್ಲಿ ಯಾರೇ ಸಮಯ ಕೇಳಿದರೂ ಭೇಟಿಯಾಗುವ ಅವರು, ಕರ್ನಾಟಕದಿಂದ ಯಾವುದೇ ನಿಯೋಗ ಬಂದರೂ ಉಳಿದ ಕೇಂದ್ರ ಮಂತ್ರಿಗಳಿಗೆ ತಾವೇ ಫೋನ್‌ ಮಾಡಿ ಸಮಯ ಕೊಡಿಸುತ್ತಿದ್ದಾರೆ.

ದೇವೇಗೌಡ್ರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಲು ನೋ ಎಂದ ಪ್ರಜ್ವಲ್

20 ದಿನದಲ್ಲಿ ಎರಡು ಬಾರಿ ತಮ್ಮ ಮನೆಯಲ್ಲಿ ಸಂಸದರಿಗೆ ಊಟ ಹಾಕಿಸಿದ ಗೌಡರು ಇಲಾಖೆಯಲ್ಲೂ ಬಹಳ ಸ್ಪೀಡ್‌ ಆಗಿ ಬ್ರೀಫಿಂಗ್‌ ತೆಗೆದುಕೊಳ್ಳುತ್ತಿದ್ದಾರೆ. ಅಂದಹಾಗೆ ಕೇಂದ್ರ ಸಚಿವರಾಗಿ ಮೊದಲ ಬಾರಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ಹೋದಾಗ ಅಲ್ಲಿದ್ದ ಎಲ್ಲ ಶಾಸಕರ ಮುಂದೆಯೇ ಬಿಎಸ್‌ವೈ, ‘ದಿಲ್ಲಿಯಲ್ಲಿ ಕುಳಿತು ಅನಂತಕುಮಾರ್‌ ರಾಜ್ಯಕ್ಕೆ ಮಾಡುತ್ತಿದ್ದ ಕೆಲಸವನ್ನು ಮಾಡಿ’ ಎಂದು ನೇರವಾಗಿಯೇ ಹೇಳಿದ್ದರಂತೆ. ಅದನ್ನು ಗೌಡರು ಗಂಭೀರವಾಗಿ ತೆಗೆದುಕೊಂಡಂತಿದೆ.

ದಿಲ್ಲಿಯಲ್ಲಿ ಅಂಗಡಿ ಪ್ರಭಾವ

ಪ್ರಹ್ಲಾದ್‌ ಜೋಶಿ ಮತ್ತು ಡಿವಿಎಸ್‌ ಕ್ಯಾಬಿನೆಟ್‌ ಮಂತ್ರಿಗಳಾದರೂ ದಿಲ್ಲಿಯ ಹಿಂದಿ ಪತ್ರಕರ್ತರಲ್ಲಿ ಅತೀವ ಬೇಡಿಕೆ ಇರುವುದು ಸುರೇಶ್‌ ಅಂಗಡಿ ಪರಿಚಯಕ್ಕೆ. ದಿಲ್ಲಿ ಪತ್ರಕರ್ತರು ಬಹುತೇಕ ಉತ್ತರ ಪ್ರದೇಶ, ಬಿಹಾರದವರು.

ಇವರಿಗೆ ರೈಲ್ವೆ ಟಿಕೆಟ್‌ ಜಂಜಾಟ ಜಾಸ್ತಿ. ಪಿಯೂಷ್‌ ಗೋಯಲ್ ಕಚೇರಿ ಅಷ್ಟಾಗಿ ಯಾರನ್ನೂ ಹಚ್ಚಿಕೊಳ್ಳುವುದಿಲ್ಲ. ಹೀಗಾಗಿ ತಮ್ಮವರ ಟಿಕೆಟ್‌ ಕನ್ಫಮ್‌ರ್‍ಗಾಗಿ ದಿಲ್ಲಿ ಪತ್ರಕರ್ತರು ಸುರೇಶ ಅಂಗಡಿಯವರ ಪರಿಚಯ ಮಾಡಿಕೊಳ್ಳಲು ಓಡಾಡುತ್ತಿದ್ದಾರೆ.

ಆದರೆ ಅಂಗಡಿ ಸಾಹೇಬರಿಗೆ ಜೋಶಿಗೆ ಕ್ಯಾಬಿನೆಟ್‌ ದರ್ಜೆ ಕೊಟ್ಟು, ತಮ್ಮನ್ನು ರಾಜ್ಯ ಮಂತ್ರಿ ಮಾಡಿದ ಬಗ್ಗೆ ಬೇಸರವಿದೆ. ಆದರೆ ಯಾರ ಮುಂದೆಯೂ ಹೇಳಿಕೊಳ್ಳುವಂತಿಲ್ಲ. ಮೋದಿ ಸಾಮ್ರಾಜ್ಯದಲ್ಲಿ ಸಿಕ್ಕಿದ್ದೇ ಶಿವಾ ಅಷ್ಟೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ