ಮಹಾಮಳೆಗೆ ಭೂಕುಸಿತ.. ಪ್ರಯಾಣಿಕರೆ ದಯವಿಟ್ಟು ಗಮನಿಸಿ..

Bengaluru-Mangaluru train service suspended due to landslides
Highlights

ಬೆಂಗಳೂರು ಮತ್ತು ಮಂಗಳೂರು ಪ್ರಯಾಣಿಕರು ಈ ಸುದ್ದಿಯನ್ನು ಗಮನಿಸಲೇಬೇಕು. ಮಹಾಮಳೆಗೆ ಜಿಲ್ಲೆಯ ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯೆ ರೈಲ್ವೆ ಹಳಿ ಮೇಲೆ ಭೂಮಿ ಕುಸಿದಿದ್ದು ಭೂಕುಸಿತ ಉಂಟಾದ ಪರಿಣಾಮ ಬೆಂಗಳೂರು-ಮಂಗಳೂರು ಮಧ್ಯೆ ರೈಲು ಸಂಚಾರ ರದ್ದು ಮಾಡಲಾಗಿದೆ.
 

ಮಂಗಳೂರು ಜೂನ್ 14: ಮಹಾಮಳೆಗೆ ಜಿಲ್ಲೆಯ ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯೆ ರೈಲ್ವೆ ಹಳಿ ಮೇಲೆ ಭೂಮಿ ಕುಸಿದಿದ್ದು ಬೆಂಗಳೂರು-ಮಂಗಳೂರು ಮಧ್ಯೆ ರೈಲು ಸಂಚಾರ ರದ್ದು ಮಾಡಲಾಗಿದೆ.

ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯಭಾಗದಲ್ಲಿ ಹಠಾತ್ ಭೂಕುಸಿತ ಉಂಟಾಗಿ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಬೆಳಿಗ್ಗೆ 10.50ಕ್ಕೆ ಮಂಗಳೂರಿನಿಂದ ಹೊರಟಿದ್ದ ಕಾರವಾರ-ಬೆಂಗಳೂರು ರೈಲ್ವೆ ಸುಬ್ರಹ್ಮಣ್ಯವರೆಗೆ ಸಂಚರಿಸಿದ ನಂತರ ಮುಂದಿನ ಪ್ರಯಾಣ ರದ್ದುಗೊಳಿಸಿತು. ಅದೇ ರೀತಿ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿನತ್ತ ಹೊರಟಿದ್ದ ರೈಲು ಸಕಲೇಶಪುರದನಕ ಬಂದು ಪ್ರಯಾಣ ಮೊಟಕುಗೊಳಿಸಿತು.

ಭೂಕುಸಿತದಿಂದ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದಿದ್ದು ಜೆಸಿಬಿ ಮುಖೇನ ತೆರವು ಕಾರ್ಯಾಚರಣೆ ನಡೆಯುತ್ತಿದೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣ ಮಾಡುವವರಿದ್ದರೆ ಕೊಂಚ ಎಚ್ಚರಿಕೆ ವಹಿಸುವುದು ಒಳಿತು.

loader