ಬೆಂಗಳೂರಿನಲ್ಲಿ ಶಾಸಕರ ಪುತ್ರನ ಆಟಾಟೋಪ : ಯುವಕನ ಮೇಲೆ ಅಟ್ಯಾಕ್

Bengaluru man alleges MLA NA Haris son Assaulted him
Highlights

ಶಾಂತಿನಗರ ಶಾಸಕ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಹ್ಯಾರಿಸ್  ಆಟಾಟೋಪ ಮೆರೆದಿದ್ದು, ನಿನ್ನೆ ನಗರದ ಯುಬಿ ಸಿಟಿ ರೆಸ್ಟೋರಂಟ್’ನಲ್ಲಿ  ವಿದ್ವತ್ ಎಂಬ ವಿದ್ಯಾರ್ಥಿಯನ್ನು ಮನಬಂದಂತೆ  ಥಳಿಸಿದ್ದಾರೆ.

ಬೆಂಗಳೂರು : ಶಾಂತಿನಗರ ಶಾಸಕ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಹ್ಯಾರಿಸ್  ಆಟಾಟೋಪ ಮೆರೆದಿದ್ದು, ನಿನ್ನೆ ನಗರದ ಯುಬಿ ಸಿಟಿ ರೆಸ್ಟೋರಂಟ್’ನಲ್ಲಿ  ವಿದ್ವತ್ ಎಂಬ ವಿದ್ಯಾರ್ಥಿಯನ್ನು ಮನಬಂದಂತೆ  ಥಳಿಸಿದ್ದಾರೆ.

ಊಟ ಮಾಡುವ ವಿಷಯಕ್ಕೆ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ಮಾಡ ಲಾಗಿದೆ. ಹ್ಯಾರಿಸ್ ಮಗ ಸೇರಿ , 10 ಜನರ ಗುಂಪು ಎಕಾ ಏಕಿ ಹಲ್ಲೆ ಮಾಡಿದ್ದು ,  ಮನಸ್ಸೋ ಇಚ್ಛೆ ಥಳಿಸಿದ್ದಾರೆ.

ಕಾಲು ಮುರಿತದಿಂದ ಚಿಕಿತ್ಸೆ ಪಡಿಯುತ್ತಿದ್ದ ವಿದ್ವತ್ ಊಟಕ್ಕೆಂದು ಯು ಬಿ ಸಿಟಿಯ ರೆಸ್ಟೋರೆಂಟ್ ಗೆ ಬಂದಿದ್ದರು. ಈ ವೇಳೆ ಅದೇ ರೆಸ್ಟೋರೆಂಟ್ ಗೆ ಬಂದಿದ್ದ ಶಾಸಕ ಹ್ಯಾರಿಸ್ ಮಗ ಹಾಗು ಆತನ ಸ್ನೇಹಿತರು ಕಾಲನ್ನು ಹಿಂದಕ್ಕೆ ತೆಗೆಯುವಂತೆ ಧಮ್ಕಿ ಹಾಕಿದ್ದಾರೆ.  ಈ ವೇಳೆ ಗಲಾಟೆ ನಡೆದಿದೆ.

ಹಲ್ಲೆಗೊಳಗಾದ ವಿದ್ವತ್ ಗೆ  ಸದ್ಯ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಶಾಸಕ ಹ್ಯಾರಿಸ್ ವಿಷಯ ತಿಳಿದು ಹಲ್ಲೆಗೊಳಗಾದ ವಿದ್ವತ್ ನೋಡಲು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

 

loader