ಮೊದಲು ಕರಗ ಹೊರುವ ಜ್ಞಾನೇಂದ್ರ ಅವರಿಗೆ ಅರಿಶಿನ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ಕಬ್ಬನ್ ಉದ್ಯಾನದ ಕರಗದ ಕುಂಟೆಯಲ್ಲಿ ದೇವಿಗೆ ಗಂಗೆ ಪೂಜೆ ನೆರವೇರಿಸಲಾಯಿತು. ಬಳಿಕ ರಾತ್ರಿ 11.30ರ ಸುಮಾರಿಗೆ  ಹಸಿ ಕರಗವನ್ನು ಮಂಟಪಕ್ಕೆ ಕರೆತಂದು ವಿಶೇಷ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಕರೆತರಲಾಯಿತು.  

ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯುತ್ಸವ ರಾತ್ರಿ ಅದ್ದೂರಿಯಾಗಿ ನಡೆಯಿತು. ತಿಗಳರ ಪೇಟೆಯಲ್ಲಿರೋ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಮಧ್ಯರಾತ್ರಿ ಕರಗ ಉತ್ಸವ ಜರುಗಿತು. ಧರ್ಮರಾಯ ದೇಗುಲಕ್ಕೆ 3 ಸುತ್ತು ಹಾಕಿದ ಕರಗ ಮಧ್ಯರಾತ್ರಿ 1.45ರ ಸುಮಾರಿಗೆ ಮುಖ್ಯದ್ವಾರದಿಂದ ಹೊರ ಬಂತು. ಈ ವೇಳೆ ಕರಗದ ಮೇಲೆ ಭಕ್ತ ಗಣ ಮಲ್ಲಿಗೆ ಹೂಗಳನ್ನು ಅರ್ಪಿಸಿತು. ಕರಗ ಸಾಗುವ ದಾರಿಯಲ್ಲಿ ಗೋವಿಂದನ ನಾಮಸ್ಮರಣೆ ಕೇಳಿ ಬಂತು. ವಿಶ್ವವಿಖ್ಯಾತ ಕರಗಕ್ಕೆ ಸಹಸ್ರಾರು ಜನ ಸಾಕ್ಷಿಯಾದರು.

ಮೊದಲು ಕರಗ ಹೊರುವ ಜ್ಞಾನೇಂದ್ರ ಅವರಿಗೆ ಅರಿಶಿನ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ಕಬ್ಬನ್ ಉದ್ಯಾನದ ಕರಗದ ಕುಂಟೆಯಲ್ಲಿ ದೇವಿಗೆ ಗಂಗೆ ಪೂಜೆ ನೆರವೇರಿಸಲಾಯಿತು. ಬಳಿಕ ರಾತ್ರಿ 11.30ರ ಸುಮಾರಿಗೆ ಹಸಿ ಕರಗವನ್ನು ಮಂಟಪಕ್ಕೆ ಕರೆತಂದು ವಿಶೇಷ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಕರೆತರಲಾಯಿತು. ಈ ವೇಳೆ ಕತ್ತಿ ಹಿಡಿದ ವೀರ ಕುಮಾರರು ಸಾಥ್ ನೀಡಿದರು.

ಮಧ್ಯರಾತ್ರಿ 1.45 ರ ಸಮಾರಿಗೆ ದರ್ಮರಾಯ ದೇವಾಲಯದಿಂದ ದ್ರೌಪದಿ­ ದೇವಿಯ ಹೂವಿನ ಕರಗ ಹೊರಡಿತು. ಕರಗಕ್ಕೆ ಸಿಎಂ ಸಿದ್ದರಾಮಯ್ಯ, ಮೇಯರ್ ಪದ್ಮಾವತಿ, ಆರ್ ವಿ ದೇವರಾಜ್, ಅರವಿಂದ್ ಲಿಂಬಾವಳಿ, ಹಾಗೂ ಕೇಂದ್ರ ಸಚವ ಅನಂತ್ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಕರಗ ಸಂಭ್ರಮಕ್ಕೆ ಸಾಕ್ಷಿಯಾದರು.

ತಿಗಳರಪೇಟೆ ಧರ್ಮರಾಯಸ್ವಾಮಿ ದೇಗುಲದಿಂದ ಅವೆನ್ಯೂ ರಸ್ತೆ, ಅಣ್ಣಮ್ಮನ ದೇವಸ್ಥಾನ, ಮೈಸೂರು ಬ್ಯಾಂಕ್​ ಸರ್ಕಲ್​, ಕಬ್ಬನ್​ ಪೇಟೆ, ದೊಡ್ಡಪೇಟೆ, ಕೃಷ್ಣರಾಜ ಮಾರುಕಟ್ಟೆ ಅಕ್ಕಿಪೇಟೆ, ಅರಳೇಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ

ತಿಗಳರಪೇಟೆಗಳಲ್ಲಿ ಸಂಚರಿಸಿತು.