Asianet Suvarna News Asianet Suvarna News

ಹೆಮ್ಮೆಯ ಬೆಂಗಳೂರು..! ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರ ಬೆಂಗಳೂರು ಎನ್ನುತ್ತದೆ ಡಬ್ಲ್ಯೂಇಎಫ್ ವರದಿ

ಜನಸಂಖ್ಯೆ, ತಂತ್ರಜ್ಞಾನ, ಸಂಶೋಧನೆ(ಆರ್ ಅಂಡ್ ಡಿ), ಕನೆಕ್ಟಿವಿಟಿ, ಕಾರ್ಪೊರೇಟ್ ಚಟುವಟಿಕೆ, ಶಿಕ್ಷಣ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ, ಈ ಮೊದಲಾದ ಅಂಶಗಳ ಆಧಾರದ ಮೇಲೆ ರ್ಯಾಂಕಿಂಗ್ ನೀಡಲಾಗಿದೆ.

bengaluru is the most dynamic city says wef report
  • Facebook
  • Twitter
  • Whatsapp

ಬೆಂಗಳೂರು(ಜ. 18): ಹೊಸ ವರ್ಷಾಚರಣೆಯಂದು ಲೈಂಗಿಕ ದೌರ್ಜನ್ಯ ಪ್ರಕರಣಗಳ ಮಸಿ ಮೆತ್ತಿಕೊಂಡಿದ್ದ ಬೆಂಗಳೂರಿಗೆ ಸಮಾಧನ ತರುವಂಥ ಸುದ್ದಿ ಇದು. ಡಾವೋಸ್'ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಮ್'ನಲ್ಲಿ ಸಲ್ಲಿಕೆಯಾದ ವರದಿಯೊಂದರ ಪ್ರಕಾರ, ಸದ್ಯಕ್ಕೆ ವಿಶ್ವದ ಮೋಸ್ಟ್ ಡೈನಾಮಿಕ್ ಸಿಟಿ ಎಂದರೆ ಬೆಂಗಳೂರೇ. ಈ ವಿಷಯದಲ್ಲಿ ನಮ್ಮ ಸಿಲಿಕಾನ್ ಸಿಟಿಯು ಅಮೆರಿಕದ ಸಿಲಿಕಾನ್ ವ್ಯಾಲಿ ಎನ್ನಲಾದ ಕ್ಯಾಲಿಫೋರ್ನಿಯಾವನ್ನೇ ಹಿಂದಿಕ್ಕಿದೆ. ಅದ್ಭುತ ಮೂಲಭೂತ ಸೌಕರ್ಯ ಹೊಂದಿರುವ ಚೀನಾದ ಪ್ರತಿಷ್ಠಿತ ಶಾಂಘೈ ನಗರವನ್ನೂ ಬೆಂಗಳೂರು ಹಿಂದಿಕ್ಕಿದೆ.

ಮೋಸ್ಟ್ ಡೈನಾಮಿಕ್ ಸಿಟಿ, ಅಂದರೆ ಅತ್ಯಂತ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ 4ನೇ ಸ್ಥಾನದಲ್ಲಿದೆ. ಟಾಪ್ 30 ಪಟ್ಟಿಯಲ್ಲಿ ಪುಣೆ, ಚೆನ್ನೈ, ಮುಂಬೈ, ದೆಹಲಿ ನಗರಗಳಿವೆ.

ಯಾವ ಆಧಾರ?
ಜನಸಂಖ್ಯೆ, ತಂತ್ರಜ್ಞಾನ, ಸಂಶೋಧನೆ(ಆರ್ ಅಂಡ್ ಡಿ), ಕನೆಕ್ಟಿವಿಟಿ, ಕಾರ್ಪೊರೇಟ್ ಚಟುವಟಿಕೆ, ಶಿಕ್ಷಣ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ, ಈ ಮೊದಲಾದ ಅಂಶಗಳ ಆಧಾರದ ಮೇಲೆ ರ್ಯಾಂಕಿಂಗ್ ನೀಡಲಾಗಿದೆ. ಅಂದರೆ, ನಗರದ ಬೆಳವಣಿಗೆ, ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಕ್ಷಮತೆ, ಉದ್ಯಮಕ್ಕೆ ಬೇಕಾದ ಪೂರಕ ವಾತಾವರಣ, ಜೀವನ ನಿರ್ವಹಣೆಗೆ ಬೇಕಾದ ಪರಿಸರ ಇತ್ಯಾದಿ ಅಂಶಗಳನ್ನು ಪ್ರಮುಖವಾಗಿ ಪರಿಗಣಿತವಾಗಿವೆ.

ಜೇಮ್ಸ್ ಲ್ಯಾಂಗ್ ಲಾಸೆಲ್ಲೇ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಈ ಎಲ್ಲಾ ಅಂಶಗಳ ಆಧಾರದ ಮೇಲೆ ಮೋಸ್ಟ್ ಡೈನಾಮಿಕ್ ಸಿಟಿಗಳ ಪಟ್ಟಿ ತಯಾರಿಸಿದೆ. ರಾಜ್ಯದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವರದಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಬೆಂಗಳೂರು ನಗರದಲ್ಲಿ ಬಂಡವಾಳ ಹೂಡಿಕೆಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios