ಜನಸಂಖ್ಯೆ, ತಂತ್ರಜ್ಞಾನ, ಸಂಪರ್ಕ, ಸಹಕಾರಿ ಚಟುವಟಿಕೆ, ಶಿಕ್ಷಣ ರಿಯಲ್ ಎಸ್ಟೇಟ್ ಹೂಡಿಕೆ ಮುಂತಾದ ಅಭಿವೃದ್ಧಿಪೂರಕ ಅಂಶಗಳನ್ನ ಆಧರಿಸಿ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಲ್ಯಾಂಗ್ ಲಸೆಲ್ಲೆ ಈ ಶ್ರೇಯಾಂಕ ನೀಡಿದೆ.
ಬೆಂಗಳೂರು(ಜ.18): ಗಾರ್ಡನ್ ಸಿಟಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಯಶಸ್ಸಿನ ಗರಿ ಏರಿದೆ. ವಿಶ್ವದ ಟಾಪ್ 10 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ಸಿಕ್ಕಿದೆ. ಬೀಜಿಂಗ್ ಮತ್ತು ಬೋಸ್ಟನ್ ನಗರಗಳನ್ನ ಹಿಂದಿಕ್ಕಿ ಬೆಂಗಳೂರು ಈ ಖ್ಯಾತಿ ಪಡೆದಿದೆ. ಇನ್ನೂ ಟಾಪ್ 10 ಸ್ಪರ್ಧೆಯಲ್ಲಿದ್ದ ಹೈದ್ರಾಬಾದ್ 5ನೇ ಸ್ಥಾನ ಪಡೆದಿದೆ. ರಾಜಧಾನಿ ನವದೆಹಲಿ ಟಾಪ್ 30ಯಲ್ಲಿ ಸ್ಥಾನ ಪಡೆದಿದೆ.
ಜನಸಂಖ್ಯೆ, ತಂತ್ರಜ್ಞಾನ, ಸಂಪರ್ಕ, ಸಹಕಾರಿ ಚಟುವಟಿಕೆ, ಶಿಕ್ಷಣ ರಿಯಲ್ ಎಸ್ಟೇಟ್ ಹೂಡಿಕೆ ಮುಂತಾದ ಅಭಿವೃದ್ಧಿಪೂರಕ ಅಂಶಗಳನ್ನ ಆಧರಿಸಿ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಲ್ಯಾಂಗ್ ಲಸೆಲ್ಲೆ ಈ ಶ್ರೇಯಾಂಕ ನೀಡಿದೆ.