ಕೇರಳದ ದಂಪತಿಯೊಬ್ಬರು ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು ಅವರಿಬ್ಬರಿಗೂ ಹೊಟೇಲ್’ನಲ್ಲಿ ಒಂದೇ ರೂಮ್ ಕೊಡಲು ನಿರಾಕರಿಸಿರುವ ಘಟನೆ ನಡೆದಿದೆ. ಅವರು ಹಿಂದೂ-ಮುಸ್ಲೀಂ ಧರ್ಮಕ್ಕೆ ಸೇರಿದವರಾದ್ದರಿಂದ ಒಂದೇ ರೂಮ್ ಕೊಡಲು ಸಾಧ್ಯವಿಲ್ಲ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾರೆ.

ಬೆಂಗಳೂರು (ಜು.04): ಕೇರಳದ ದಂಪತಿಯೊಬ್ಬರು ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು ಅವರಿಬ್ಬರಿಗೂ ಹೊಟೇಲ್’ನಲ್ಲಿ ಒಂದೇ ರೂಮ್ ಕೊಡಲು ನಿರಾಕರಿಸಿರುವ ಘಟನೆ ನಡೆದಿದೆ. ಅವರು ಹಿಂದೂ-ಮುಸ್ಲೀಂ ಧರ್ಮಕ್ಕೆ ಸೇರಿದವರಾದ್ದರಿಂದ ಒಂದೇ ರೂಮ್ ಕೊಡಲು ಸಾಧ್ಯವಿಲ್ಲ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾರೆ.

ಪತ್ರಕರ್ತರಾಗಿರುವ ಶಫೀಕ್ ಸುಬೈದಾ ಹಕ್ಕೀಂ, ಅವರ ಪತ್ನಿ ದಿವ್ಯಾ ಡಿ.ವಿ ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದ್ದಾರೆ. ದಿವ್ಯಾ ಎರ್ನಾಕುಲಂನ ಲಾ ಕಾಲೇಜೊಂದರಲ್ಲಿ ಕಾನ್ಸಿಟ್ಯೂಷನಲ್ ಲಾ ಬಗ್ಗೆ ಪಿಎಚ್’ಡಿ ಮಾಡುತ್ತಿದ್ದಾರೆ. ನ್ಯಾಷನಲ್ ಲಾ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಹುದ್ದೆಗೆ ಇಂಟರ್ವೂಗಾಗಿ ಬಂದಿದ್ದರು. ಸುಧಾಮ ನಗರದಲ್ಲಿರುವ ಒಲೈವ್ ರೆಸಿಡೆನ್ಸಿಯಲ್ಲಿ ರೂಮ್ ವಿಚಾರಿಸಿದರೆ ಅವರು ಕೊಡಲು ನಿರಾಕರಿಸಿದ್ದಾರೆ.

ಹೊಟೇಲ್ ರಿಸಪ್ಷನಿಸ್ಟ್ ಶಫೀಕ್ ಮತ್ತು ಅವರ ಪತ್ನಿಯ ಐಡಿ ಪ್ರೋವ್ ಕೇಳಿದ್ದಾರೆ. ಅದರಲ್ಲಿ ಹಿಂದೂ-ಮುಸ್ಲೀಂ ಹೆಸರಿರುವುದನ್ನು ನೋಡಿ ನಿಮ್ಮಿಬ್ಬರಿಗೂ ಒಂದೇ ರೂಮ್ ಕೊಡಲಾಗುವುದಿಲ್ಲ ಎಂದಿದ್ದಾನೆ. ಇವರು ಯಾಕೆ ಎಂದು ಪ್ರಶ್ನಿಸಿದಾಗ ಇದು ನಮ್ಮ ಹೊಟೇಲಿನ ನಿಯಮ ಎಂದು ಕಡೆಗೂ ಕೊಡಲು ಒಪ್ಪಲಿಲ್ಲ. “ನಾವು ಮದುವೆಯಾಗಿ 7 ವರ್ಷಗಳಾಗಿವೆ. ಯಾವತ್ತೂ ಈ ರೀತಿ ಅನುಭವವಾಗಿರಲಿಲ್ಲ. ನಾವು ಪೊಲೀಸರನ್ನು ಕರೆಯುತ್ತೇವೆ ಎಂದರೂ ಆತ ಕೊಡಲೊಪ್ಪಲಿಲ್ಲ. ಮುಸ್ಲೀಂ ವ್ಯಕ್ತಿಯೊಬ್ಬ ಹಿಂದೂ ಹುಡುಗಿಯ ಜೊತೆ ಬಂದಿದ್ದಾನೆ ಎನ್ನುವುದೇ ದೊಡ್ಡ ವಿಚಾರ" ಎಂದು ಶಫೀಕ್ ಹೇಳಿದ್ದಾರೆ.