ಬೆಂಗಳೂರು [ಜೂ.27] ಪ್ರಿಯಕರ ಬೇರೆ ಯುವತಿಯನ್ನು ಮದುವೆಯಾಗುತ್ತಿದ್ದಾನೆ ಎಂದು ತಿಳಿದ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಶಂವತಪುರದ ನಿವಾಸಿ ಸುಪ್ರಿಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ

ಸುಪ್ರಿಯಾಗೆ ಕರೆ ಮಾಡಿದ ಶರತ್ ತಾನು ಬೇರೆ ಹುಡುಗಿಯನ್ನು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾನೆ. ಇದನ್ನು ಅರಗಿಸಿಕೊಳ್ಳಲಾಗದೇ ಪ್ರಾಣ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ.

ತನ್ನ  ತಾಯಿಗೆ‌ ಪ್ರೀತಿಯ ವಿಚಾರ ಹೇಳಲಾಗದೇ ಮೊಬೈಲ್ ನಲ್ಲಿ‌ ಆಡಿಯೋ ರೆಕಾರ್ಡ್ ಮಾಡಿದ್ದ ಸುಪ್ರಿಯಾ ಸಂಜೆ ಮನೆಯ ಟೆರೆಸ್‌ಗೆ ತೆರಳಿ ವಿಷ ಸೇವಿಸಿದ್ದಾಳೆ.  ನಂತರ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ಬೆಳಗಿನ ಜಾವ ಸಾವನ್ನಪ್ಪಿದ್ದಾಳೆ.

ಮೋಸಗಾರ ಶರತ್‌ಗೆ ಗೂಸಾ: ಸುಪ್ರಿಯಾಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಶರತ್ ಇದೀಗ ಪೊಲೀಸ್ ಠಾಣೆಯಲ್ಲಿದ್ದಾನೆ. ಶರತ್‌ನನ್ನು ಹಿಡಿದ ಯಶವಂತಪುರ ಜನರು ಗೂಸಾ ನೀಡಿ ಪೊಲೀರಿಗೆ ಒಪ್ಪಿಸಿದ್ದಾರೆ.