ಎಂಟು ಭಾರೀ ಹಾಗೂ ಒಂದು ಮಧ್ಯಮ ಗಾತ್ರದ ಮೆಕಾನಿಕಲ್‌ ಸ್ವೀಪಿಂಗ್‌ ಯಂತ್ರವನ್ನು ಪಾಲಿಕೆ ಖರೀದಿ ಮಾಡಿದ್ದು, ಪ್ರತಿ ಯಂತ್ರವೂ 100 ಪೌರ ಕಾರ್ಮಿಕರ ಕೆಲಸವನ್ನು ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ನಗರದ ಮುಖ್ಯ ರಸ್ತೆ, ಹೊರವರ್ತುಲ ರಸ್ತೆ ಹಾಗೂ ಮೇಲ್ಸೇತುವೆ ರಸ್ತೆಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಬಿಬಿಎಂಪಿ ಖರೀದಿಸಿರುವ ಒಂಬತ್ತು ಯಾಂತ್ರಿಕ ಕಸ ಗುಡಿಸುವ ಯಂತ್ರಗಳಿಗೆ (ಮೆಕಾನಿಕಲ್‌ ಸ್ವೀಪಿಂಗ್‌ ಮೆಷಿನ್‌) ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದ್ದಾರೆ.

ಎಂಟು ಭಾರೀ ಹಾಗೂ ಒಂದು ಮಧ್ಯಮ ಗಾತ್ರದ ಮೆಕಾನಿಕಲ್‌ ಸ್ವೀಪಿಂಗ್‌ ಯಂತ್ರವನ್ನು ಪಾಲಿಕೆ ಖರೀದಿ ಮಾಡಿದ್ದು, ಪ್ರತಿ ಯಂತ್ರವೂ 100 ಪೌರ ಕಾರ್ಮಿಕರ ಕೆಲಸವನ್ನು ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯಂತ್ರಗಳಿಗೆ ಹಸಿರು ನಿಶಾನೆ ತೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಗರವನ್ನು ಸ್ವಚ್ಛವಾಗಿಡಲು ಒಂಬತ್ತು ಯಂತ್ರ ತರಿಸಿದ್ದು, ಪ್ರತಿ ವಾಹನಗಳಿಗೆ ಜಿಪಿಎಸ್‌ ಸಾಧನ, ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇದರ ಮೂಲಕ ಕಾರ‍್ಯವೈಖರಿ ಮೇಲೆ ಅಧಿಕಾರಿಗಳು ನಿಗಾ ಇಡಲು ಸಹಕಾರಿಯಾಗಲಿದೆ ಎಂದು ಹೇಳಿದರು.