ಬೆಂಗಳೂರು ದುಬಾರಿಯಲ್ಲ, ಜಗತ್ತಿನ ಅಗ್ಗದ ನಗರ: ಸಮೀಕ್ಷೆ| ಪ್ಯಾರಿಸ್, ಹಾಂಕಾಂಗ್, ಸಿಂಗಾಪುರ ಬಲು ದುಬಾರಿ| ಎಕನಾಮಿಸ್ಟ್ ಪತ್ರಿಕೆಯ ಸಮೀಕ್ಷಾ ವರದಿ ಬಿಡುಗಡೆ| ವಿಶ್ವದ 133 ನಗರಗಳ ಪೈಕಿ ಬೆಂಗಳೂರಿಗೆ 129ನೇ ಸ್ಥಾನ
ನ್ಯೂಯಾರ್ಕ್[ಮಾ.21]: ಕರ್ನಾಟಕದ ರಾಜಧಾನಿ, ಭಾರತದ ಐಟಿ ಸಿಟಿ ಬೆಂಗಳೂರು ಬಲು ದುಬಾರಿ ಎಂದು ಜನರು ಮಾತನಾಡುವುದನ್ನು ಕೇಳಿಯೇ ಇರುತ್ತೀರಿ. ಆದರೆ ಲಂಡನ್ ಮೂಲದ ಎಕನಾಮಿಸ್ಟ್ ಪತ್ರಿಕೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಬೆಂಗಳೂರು ದುಬಾರಿಯಲ್ಲ. ಜಗತ್ತಿನ ಅಗ್ಗದ ನಗರಗಳಲ್ಲಿ ಒಂದು. ನವದೆಹಲಿ, ಚೆನ್ನೈಗಿಂತಲೂ ಬೆಂಗಳೂರಿನಲ್ಲಿ ಜೀವನ ನಡೆಸುವುದು ದುಬಾರಿಯ ಬಾಬತ್ತಲ್ಲ!
ವಿಶ್ವದ 133 ನಗರಗಳಲ್ಲಿ ಸುಮಾರು 150 ವಸ್ತುಗಳಿಗೆ ಎಷ್ಟುಬೆಲೆ ಇದೆ ಎಂಬುದರ ಆಧಾರದ ಮೇಲೆ ಎಕನಾಮಿಸ್ಟ್ ಪತ್ರಿಕೆ ಈ ಸಮೀಕ್ಷೆ ನಡೆಸಿದೆ. ಪ್ಯಾರಿಸ್, ಹಾಂಕಾಂಗ್ ಹಾಗೂ ಸಿಂಗಾಪುರಗಳು ಪ್ರಥಮ 3 ಸ್ಥಾನಗಳನ್ನು ಜಂಟಿಯಾಗಿ ಹಂಚಿಕೊಳ್ಳುವ ಮೂಲಕ ವಿಶ್ವದ ದುಬಾರಿ ನಗರಗಳಾಗಿ ಹೊರಹೊಮ್ಮಿವೆ.
ಮಿಕ್ಕಂತೆ, ಪಟ್ಟಿಯಲ್ಲಿ ದೆಹಲಿ 123 ಸ್ಥಾನದಲ್ಲಿದೆ. ಚೆನ್ನೈ 125ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು 129ನೇ ರಾರಯಂಕ್ ಪಡೆದಿದೆ. ಪಟ್ಟಿಯಲ್ಲಿ ಭಾರತೀಯ ನಗರಗಳು ಕೊನೆಯ ಸಾಲಿನಲ್ಲಿ ಉಳಿಯುವ ಮೂಲಕ ವಿಶ್ವದಲ್ಲಿ ತಾವು ದುಬಾರಿ ನಗರಗಳಲ್ಲ ಎಂಬ ಸಂದೇಶ ಸಾರಿವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 21, 2019, 8:26 AM IST