ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ಯುವಕ-ಯುವತಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 5 ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು (ಏ.11): ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ಪಾರ್ಕ್ ಬಳಿ ಸ್ಕೂಟರ್‌ನಲ್ಲಿ ಕೂತಿದ್ದ ಯುವಕ ಮತ್ತೆ ಯುವತಿಗೆ ಐದು ಜನ ಸೇರಿ ಕೆಟ್ಟದಾಗಿ ಮಾತನಾಡಿದಲ್ಲದೆ, ಬೆದರಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ 5 ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಒಬ್ಬ ಹುಡುಗ ಇನ್ನೂ ಅಪ್ರಾಪ್ತನಾಗಿದ್ದ ಕಾರಣಕ್ಕೆ ಆತನ ಬಂಧನ ನಡೆದಿಲ್ಲ.
ಈ ನಡುವೆ ಇಂಥಾ ಕೆಲಸಗಳನ್ನ ರಾಜ್ಯದಲ್ಲಿ ಯಾವ ಕಾರಣಕ್ಕೂ ಒಪ್ಪಿಕೊಳ್ಳೋಕೆ ಆಗೋದಿಲ್ಲ. ನೈತಿಕ ಪೊಲೀಸ್‌ಗಿರಿಯನ್ನು ಕರ್ನಾಕಟ ಎಂದೂ ಒಪ್ಪಿಕೊಳ್ಳೋದಿಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಿತ್ತಳೆ ಬಣ್ಣದ ಟೀಶರ್ಟ್ ಹಾಕೊಂಡಿದ್ದ ಒಬ್ಬ ಹುಡುಗ ಮತ್ತೆ ಬುರ್ಖಾ ಹಾಕೊಂಡಿದ್ದ ಒಬ್ಬ ಹುಡುಗಿ ಸ್ಕೂಟರ್‌ನಲ್ಲಿ ಒಬ್ಬರಿಗೊಬ್ಬರು ಮುಖಾಮುಖಿ ಕುಳಿತಿದ್ದರು. ಈ ವೇಳೆ ಅವರ ಹತ್ತಿರ ಬರುವ ಐದು ಮಂದಿ ಜೋರಾಗಿ ಜಗಳವಾಡಿದ್ದಾರೆ. ಅದರಲ್ಲಿ ಒಬ್ಬ ಹುಡುಗ ಇಡೀ ಪ್ರಕರಣದಲ್ಲಿ ಹುಡುಗಿಯ ವಿಡಿಯೋ ಮಾಡುತ್ತಿದ್ದ.ಮೊದಲು ಆ ಹುಡುಗಿಯ ಬಳಿ ಆಕೆಯ ಮನೆ ಹಾಗೂ ಕುಟುಂಬದ ಬಗ್ಗೆ ಕೇಳಿದ್ದಾರೆ.
ಆ ಬಳಿಕ ಬೇರೆ ಜಾತಿಯ ಹುಡುಗಿಯ ಜೊತೆ ಯಾಕೆ ಸುತ್ತಾಡ್ತಿದ್ದೀಯಾ ಅಂತಾ ಆ ಹುಡುಗನ್ನ ಪ್ರಶ್ನೆ ಮಾಡಿದ್ದಾರೆ. ಬುರ್ಖಾ ಹಾಕೊಂಡು ಒಬ್ಬ ಗಂಡಸನ ಜೊತೆ ಕೂತ್ಕೊಳ್ಳೋಕೆ ನಾಚಿಕೆ ಆಗಲ್ವಾ ಅಂತಾ ಆ ಹುಡುಗಿಗೆ ಬೆದರಿಸೋದು ವಿಡಿಯೋದಲ್ಲಿ ದಾಖಲಾಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಹುಡುಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾಲ್ವರ ಮೇಲೆ ಕೇಸ್ ಹಾಕಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಡೆಪ್ಯೂಟಿ ಕಮಿಷನರ್ ಗಿರೀಶ್ ಹೇಳಿದ್ದಾರೆ. ಹುಡುಗ ಮತ್ತೆ ಹುಡುಗಿ ಸ್ಕೂಟರ್‌ನಲ್ಲಿ ಕುಳಿತಿದ್ದರು, ಆಗ ಐದು ಜನ ಬಂದು ಪ್ರಶ್ನೆ ಮಾಡಿದ್ದಾರೆ. ಆಮೇಲೆ ಹೊಡೆದಾಟ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆ ಹುಡುಗನನ್ನು ದೊಣ್ಣೆಯಿಂದ ಹೊಡೆಯುವ ಇನ್ನೊಂದು ವಿಡಿಯೋ ಕೂಡಾ ಹೊರಗೆ ಬಂದಿದೆ. ಹುಡುಗಿ ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಕೇಸ್ ಹಾಕಿದ್ದಾರೆ. ಐದು ಜನರನ್ನು ಹಿಡಿದಿದ್ದೇವೆ. ಅದರಲ್ಲಿ ಒಬ್ಬ ಇನ್ನೂ ಚಿಕ್ಕವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ RCB ಸೋಲಿಗೆ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನೆಟ್ಟಿಗರು!
ಯಾಕೆ ಅಲ್ಲಿ ಕೂತಿದ್ದೀರಾ ಅಂತಾ ಆ ಗುಂಪಿನವರು ಹುಡುಗಿಯನ್ನ ಕೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.. ಹುಡುಗಿಯಿಂದ ಕಂಪ್ಲೇಂಟ್ ಬಂದಿದೆ ಅಂತಾನೂ ಪೊಲೀಸ್ ಕನ್ಫರ್ಮ್ ಮಾಡಿದ್ದಾರೆ. ಇಂಥಾ ಘಟನೆಗಳನ್ನ ಯಾವ ಕಾರಣಕ್ಕೂ ಒಪ್ಪಿಕೊಳ್ಳೋಕೆ ಆಗಲ್ಲ ಅಂತಾ ಕರ್ನಾಟಕದ ಮಂತ್ರಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ರಾಜ್ಯದ್ಲಿ ನೈತಿಕ ಪೊಲೀಸ್‌ಗಿರಿ ಕೆಲಸ ಮಾಡೋಕೆ ಬಿಡಲ್ಲ. ಇದು ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಅಲ್ಲ, ಕರ್ನಾಟಕ ಮುಂದುವರಿದ ರಾಜ್ಯ. ಇಂಥವೆಲ್ಲಾ ರಾಜ್ಯ ಸರ್ಕಾರ ಸಹಿಸಿಕೊಳ್ಳೋದಿಲ್ಲ ಎಂದಿದ್ದಾರೆ.
ಖಾಸಗಿ ಶಾಲೆಗಳ ಶುಲ್ಕ 15-20% ಹೆಚ್ಚಳ: ದರ ಏರಿಕೆಯಿಂದ ಪೋಷಕರಿಗೆ ಹೊರೆ
