ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮೂಲದ ಮಹಿಳೆಯನ್ನು ಅಪಮಾನಗೊಳಿಸಲಾಗಿದೆ. ಮಹಿಳೆಯನ್ನು ವಿವಸ್ತ್ರಗೊಳಿಸಿ ಶೋಧ ನಡೆಸಲು ಅಧಿಕಾರಿಗಳು ಯತ್ನಿಸಿದ ಘಟನೆ ವಿವಾದ ಸೃಷ್ಠಿಸಿದೆ. ಈ ಕುರಿತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಜರ್ಮನ್ ರಾಯಭಾರ ಕಚೇರಿಯಿಂದ ವರದಿ ಕೇಳಿದ್ದಾರೆ.

ನವದೆಹಲಿ (ಏ.02): ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮೂಲದ ಮಹಿಳೆಯನ್ನು ಅಪಮಾನಗೊಳಿಸಲಾಗಿದೆ. ಮಹಿಳೆಯನ್ನು ವಿವಸ್ತ್ರಗೊಳಿಸಿ ಶೋಧ ನಡೆಸಲು ಅಧಿಕಾರಿಗಳು ಯತ್ನಿಸಿದ ಘಟನೆ ವಿವಾದ ಸೃಷ್ಠಿಸಿದೆ. ಈ ಕುರಿತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಜರ್ಮನ್ ರಾಯಭಾರ ಕಚೇರಿಯಿಂದ ವರದಿ ಕೇಳಿದ್ದಾರೆ.

ಬೆಂಗಳೂರಿನಿಂದ ಐಸ್ ಲ್ಯಾಂಡ್ ಗೆ ತೆರಳುತ್ತಿದ್ದ 30 ವರ್ಷದ ಶೃತಿ ಬಸಪ್ಪ ಎಂಬುವವರನ್ನು ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣ ಸಿಬ್ಬಂದಿ ಶೋಧ ಕಾರ್ಯ ವೇಳೆ ಅಸಭ್ಯವಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಶೃತಿ ಬಸಪ್ಪ, ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಬಾಡಿ ಸ್ಕ್ಯಾನ್ ಬಳಿಕ ನನ್ನನ್ನು ತಡೆದ ಅಧಿಕಾರಿಗಳು ಅನುಮಾನದಿಂದ ಬಟ್ಟೆ ಬಿಚ್ಚಲು ಹೇಳಿದರು. ಇದರಿಂದ ತೀವ್ರ ಮುಜುಗರಗೊಂಡ ನಾನು 2 ವಾರಗಳ ಹಿಂದಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ನಿಧಾನವಾಗಿ ದೇಹ ಮುಟ್ಟಿ ಪರಿಶೀಲನೆ ಮಾಡಿ ಎಂದು ಮನವಿ ಮಾಡಿಕೊಂಡೆ. ಅಧಿಕಾರಿಗಳ ಮುಂದೆ ನನ್ನ ವೈದ್ಯಕೀಯ ವರದಿಗಳನ್ನೂ ತೋರಿಸಿದೆ. ಅದರೂ ಒಪ್ಪದ ಅಧಿಕಾರಿಗಳು ತಮ್ಮ ಪಟ್ಟು ಸಡಿಲಿಸಲಿಲ್ಲ. ಬಟ್ಟೆ ಬಿಚ್ಚುವಂತೆ ಹೇಳಿದರು. ಹೀಗಾಗಿ ಹೊರಗೆ ನಿಂತಿದ್ದ ನನ್ನ ಪತಿಯನ್ನು ಬಳಿಗೆ ಕರೆದೆ, ನನ್ನ ಪತಿ ಹತ್ತಿರಕ್ಕೆ ಬರುತ್ತಿದ್ದಂತೆಯೇ ಅಧಿಕಾರಿಗಳ ವರ್ತನೆಯೇ ಬೇರೆಯಾಗಿತ್ತು ಎಂದು ಬರೆದು ಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲೂ ಶೃತಿ ದೂರು ದಾಖಲಿಸಿದ್ದಾರೆ.