Asianet Suvarna News Asianet Suvarna News

ಬೆಂಗಾಲ್ ಜಿಹಾದ್ ಫ್ಯಾಕ್ಟರಿ: ಲಡ್ಡೂ ಅಂಗಡಿ ಹಿಂದೊಂದು ಶಸ್ತ್ರಾಸ್ತ್ರ ಜಗತ್ತು!

ಲಡ್ಡು ಅಂಗಡಿ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ! ಕೋಲ್ಕತ್ತಾ ಹೊರವಲಯದಲ್ಲಿ ಇದೆ ಕಾರ್ಖಾನೆ !ಎನ್‌ಆರ್‌ಸಿ ವಿರುದ್ಧ ಮಮತಾ ಹೋರಾಟ! ಸಿಎಂ ಕಣ್ಣಿಗೆ ಕಾಣ್ಸಲ್ವಾ ಈ ‘ಬ್ಲಡ್ ಬಾತ್’?
 

Bengal jihad factory: Behind laddu shop is arms manufacturing unit
Author
Bengaluru, First Published Aug 2, 2018, 12:27 PM IST

ಕೋಲ್ಕತ್ತಾ(ಆ.2): ಅಸ್ಸೋಂನಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ ಆರಂಭವಾಗುತ್ತಿದ್ದಂತೇ, ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಅದರಲ್ಲೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರದ ನಿರ್ಣಯ ನಾಗರಿಕ ಯುದ್ಧಕ್ಕೆ ನಾಂದಿ ಹಾಡಲಿದೆ ಎಂಬಷ್ಟರ ಮಟ್ಟಿಗೆ ಹೇಳಿಕೆ ನೀಡಿದ್ದಾರೆ.

ನಾಗರಿಕರ ರಾಷ್ಟ್ರೀಯ ನೋಂದಣಿ ಅಸ್ಸೋಂ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಪ್ರಕ್ರಿಯೆ. ಆದರೆ ಅಕ್ರಮ ವಲಸಿಗರ ಪರವಾಗಿ ನಿಂತಿರುವ ಮಮತಾ ಬ್ಯಾನರ್ಜಿ ಮತ್ತಿತರ ರಾಜಕೀಯ ನಾಯಕರು, ತಮ್ಮ ರಾಜಕೀಯ ಲಾಭಕ್ಕಾಗಿ ದೇಶದ ಭದ್ರತೆಗೆ ಆತಂಕ ತಂದೊಡ್ಡಿದ್ದಾರಾ ಎಂಬ ಆತಂಕ ಇದೀಗ ಕಾಡತೊಡಗಿದೆ.

ಕಾರಣ ಅಕ್ರಮ ವಲಸಿಗರ ಮೇಲೆ ಕರುಣೆ ತೋರುವ ಮಾತುಗಳಾಡುತ್ತಿರುವ ಮಮತಾ ಬ್ಯಾನರ್ಜಿ, ರಾಜಧಾನಿ ಪಕ್ಕದಲ್ಲೇ ಸ್ವೀಟ್ ಮಾರ್ಟ್ ಹೆಸರಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಇರುವುದರ ಕುರಿತು ಕುರುಡಾಗಿದ್ದಾರೆ ಎಂದರೆ ಏನು ಹೇಳುವುದು.

ಹೌದು, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಿಂದ ಕೇವಲ ಕೆಲವೇ ಕಿ.ಮೀ. ದೂರದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಪತ್ತೆಯಾಗಿದ್ದು, ಸ್ವೀಟ್ ಮಾರ್ಟ್ ಹೆಸರಲ್ಲಿ ಇಲ್ಲಿ ಗುಪ್ತವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಇಲ್ಲಿ ತಯಾರಾದ ಶಸ್ತ್ರಾಸ್ತ್ರಗಳು ಬಾಂಗ್ಲಾದೇಶದ ಉಗ್ರಗ್ರಾಮಿ ಸಂಘಟನೆಗಳಿಗೆ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಭಾರತಕ್ಕೆ ಬರುವ ಅಕ್ರಮ ನುಸುಳುಕೋರರಿಗೂ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದ ಈಶಾನ್ಯ ಭಾಗದಲ್ಲಿ ಅಶಾಂತಿ ಸೃಷ್ಟಿಸುವ ಶಕ್ತಿಗಳಿಗೆ ಶಸ್ತ್ರಾಸ್ತ್ರ ಪೂರೈಕೆಗೆಂದೇ ಈ ಕಾರ್ಖಾನೆ ತೆರೆಯಲಾಗಿದ್ದು, ಇಲ್ಲಿಂದಲೇ ಬಂದೂಕು ಮತ್ತು ಮದ್ದುಗುಂಡುಗಳು ರವಾನೆಯಾಗುತ್ತಿದ್ದವು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ತಿಳಿಸಿದ್ದಾರೆ.

ಈ ಸುದ್ದಿಯ ಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ-Bengal's jihad factory: Behind laddu shop is arms manufacturing unit with suspected links to Jamat

Follow Us:
Download App:
  • android
  • ios