ಹಾಲಪ್ಪಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ: ಬೇಳೂರು ಗೋಪಾಲಕೃಷ್ಣ

First Published 31, Mar 2018, 12:07 PM IST
Beluru Gopala Krishna Response on Ticket Issue
Highlights

ಸಾಗರದಲ್ಲಿ  ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ  ಬೇಳೂರು  ಗೋಪಾಲಕೃಷ್ಣ  V/S ಹರತಾಳು ಹಾಲಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ. 

ಶಿವಮೊಗ್ಗ (ಮಾ. 31): ಸಾಗರದಲ್ಲಿ  ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ  ಬೇಳೂರು ಗೋಪಾಲಕೃಷ್ಣ V/S ಹರತಾಳು ಹಾಲಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ. 

ಸಾಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬಗ್ಗೆ ಮಾಹಿತಿ ಇಲ್ಲ ಎಂದು  ಬೇಳೂರು ಗೋಪಾಲ ಕೃಷ್ಣ ಹೇಳಿದ್ದಾರೆ.  ನನಗೆ ಟಿಕೆಟ್ ಕೊಟ್ಟರೂ,  ಕೊಡದಿದ್ದರೂ ಬಿಜೆಪಿ ಪಕ್ಷದಲ್ಲೆ ಇರುತ್ತೇನೆ.  ಹರತಾಳು ಹಾಲಪ್ಪಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ.   ಬೇಳೂರು ನಿಂತ ನೀರಲ್ಲ, ಹಾಗಾಗಿ ಬೇರೆ ಪಕ್ಷದವರು ಕರೆಯುತ್ತಿದ್ದಾರೆ ಎಂದಿದ್ದಾರೆ. 

ಸಾಗರದಲ್ಲಿ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ.  ಬೇಳೂರು ಗೋಪಾಲಕೃಷ್ಣ  ಸ್ನೇಹಮಯಿ, ಯಾರಿಗೂ ದುಷ್ಮನ್ ಅಲ್ಲ.  ನನಗೆ ಟಿಕೆಟ್ ಕೊಟ್ಟರೂ  ಕೊಡದಿದ್ದರೂ ಬಿಜೆಪಿ ಪಕ್ಷದಲ್ಲೇ  ಇರುತ್ತೇನೆ  ಎಂದಿದ್ದಾರೆ. 

loader