ಬೆಂಗಳೂರು, [ಆ.04]: ಹಾಸನದ ಬೇಲೂರು ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ ಅವರು ಇಂದು [ಭಾನುವಾರ] ಸಿಎಂ ಬಿ.ಎಸ್ ಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಇಂದು [ಭಾನುವಾರ] ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸಕ್ಕೆ ಭೇಟಿ ನೀಡಿ, ನೂತನ ಸಿಎಂ ಯಡಿಯೂರಪ್ಪ ಅವರಿಗೆ ಶುಭ ಕೋರಿದ್ದಾರೆ. ಗಮನಿಸಬೇಕಾದ ಅಂಶ ಅಂದ್ರೆ ಪುಷ್ಪಗಿರಿ ಸೋಮಶೇಖರ ಸ್ವಾಮೀಜಿ ಮೂಲಕ ಭೇಟಿ ಮಾಡಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ. 

ಬಿಜೆಪಿ ನಾಯಕರ ಜತೆ ಅನರ್ಹ ಶಾಸಕರ ಸಭೆ

ಈ ಹಿಂದೆ ಶಾಸಕ ಲಿಂಗೇಶ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹಬ್ಬಿತ್ತು. ಇದೀಗ ಸ್ವಾಮೀಜಿ ನೇತೃತ್ವದಲ್ಲಿ ಬಿಎಸ್ ವೈ ಭೇಟಿ ಮಾಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಒಟ್ಟಿನಲ್ಲಿ ಏಕಾಂಗಿಯಾಗಿ ಬಿಎಸ್ ವೈ ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ್ದರೆ,ಇದೊಂದು ಸೌಜನ್ಯದ ಭೇಟಿ ಎಂದು ಭಾವಿಸಬಹುದಿತ್ತು. ಆದ್ರೆ ಸ್ವಾಮೀಜಿಯನ್ನು ಮುಂದಿಟ್ಟು ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವುದಂತೂ ಸತ್ಯ.