ಬಳ್ಳಾರಿ ಕೇಂದ್ರ ಕಾರಾಗೃಹ' ಇನ್ನು ಮುಂದೆ ಜೀನ್ಸ್ ಉಡುಪುಗಳ ತಯಾರಿಕೆ ಮೂಲಕ ರಾಜ್ಯದ ಗಮನ ಸೆಳೆಯಲಿದೆ.
ಬಳ್ಳಾರಿ (ಡಿ.15): ಬಳ್ಳಾರಿ ಕೇಂದ್ರ ಕಾರಾಗೃಹ' ಇನ್ನು ಮುಂದೆ ಜೀನ್ಸ್ ಉಡುಪುಗಳ ತಯಾರಿಕೆ ಮೂಲಕ ರಾಜ್ಯದ ಗಮನ ಸೆಳೆಯಲಿದೆ. ಗುಣಮಟ್ಟದ ಜೀನ್ಸ್ ಉತ್ಪಾದನೆಗೆ ಬಳ್ಳಾರಿ ದೇಶ - ವಿದೇಶಗಳಲ್ಲೂ ಹೆಸರು.
ಇದೀಗ ಜೈಲು ಕೈದಿಗಳಿಂದ ಜೀನ್ಸ್ ಉಡುಪುಗಳನ್ನು ತಯಾರಿಸುವ ಮೂಲಕ ತಮ್ಮದೇ `ಬ್ರಾಂಡ್' ಹುಟ್ಟು ಹಾಕಿ ಮಾರುಕಟ್ಟೆ ಮಾಡಲು ನಿರ್ಧರಿಸಿದ್ದಾರೆ.
ಇದಕ್ಕೆ ಫ್ರೀಡಂ ಜೀನ್ಸ್ ಎಂದು ಹೆಸರಿಡಲಾಗುತ್ತಿದೆ. ಖಾಸಗಿ- ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ವ್ಯವಸ್ಥೆಯಡಿ ಉದ್ಯಮಿಗಳಿಗೆಜಾಗ, ಲೇಬರ್ಗಳು (ಕೈದಿಗಳು) ನೀಡಲಾಗುತ್ತಿದ್ದು,5 ವರ್ಷದ ಒಪ್ಪಂದವಿರುತ್ತದೆ.
