ಹತ್ತು ದಿನಗಳಲ್ಲಿ ಒಟ್ಟು 50 ಗಂಟೆ ಚರ್ಚೆ ನಡೆದಿದೆ. 15 ವಿಧೇಯಕಗಳು ಮಂಡನೆಯಾಗಿದ್ದು, 13 ವಿಧೇಯಕಳು ಅಂಗೀಕಾರವಾಗಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಹತ್ತು ದಿನಗಳ ಚಳಿಗಾಲದ ಅಧಿವೇಶನಕ್ಕೆ ಇಂದು ತೆರೆ ಎಳೆಯಲಾಯಿತು. ನವೆಂಬರ್ 21 ರಿಂದ ಆರಂಭವಾಗಿದ್ದ ಅಧಿವೇಶನದಲ್ಲಿ ಆರಂಭದಿಂದಲೂ ಸುಗಮ ಕಲಾಪ ನಡೆದಿರುವುದು ಈ ವರ್ಷದ ವಿಶೇಷ. ಹತ್ತು ದಿನಗಳಲ್ಲಿ ಒಟ್ಟು 50 ಗಂಟೆ ಚರ್ಚೆ ನಡೆದಿದೆ. 15 ವಿಧೇಯಕಗಳು ಮಂಡನೆಯಾಗಿದ್ದು, 13 ವಿಧೇಯಕಳು ಅಂಗೀಕಾರವಾಗಿದೆ. ಮಹದಾಯಿ ವಿವಾದದ ಕುರಿತು 11 ಗಂಟೆ 37 ನಿಮಿಷ ಚರ್ಚೆ, ಬರಗಾಲ ಪರಿಸ್ಥಿತಿಯ ಕುರಿತು 11 ಗಂಟೆ 34 ನಿಮಿಷ ಚರ್ಚೆ ನಡೆಸಲಾಗಿದೆ. ಹತ್ತು ದಿನಗಳ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಅವರ ರಾಜಿನಾಮೆಗೆ ಆಗ್ರಹಿಸಿ ಧರಣಿ ನಡೆಸಿರುವ ಹೊರತುಪಡಿಸಿದರೆ ಈ ಅಧಿವೇಶನದಲ್ಲಿ ಧರಣಿ ಸಭಾತ್ಯಾಗ ನಡೆದಿದ್ದು ಕಡಿಮೆಯಾಗಿದೆ.