ಗಡಿನಾಡು ಬೆಳಗಾವಿಯಲ್ಲೂ ಮಾರಣಾಂತಿಕ  ಬ್ಲೂವೇಲ್​ ಭೂತ ವಕ್ಕರಿಸಿದೆ.

ಬೆಳಗಾವಿ (ಸೆ. 20): ಗಡಿನಾಡು ಬೆಳಗಾವಿಯಲ್ಲೂ ಮಾರಣಾಂತಿಕ ಬ್ಲೂವೇಲ್​ ಭೂತ ವಕ್ಕರಿಸಿದೆ.

Add Asianetnews Kannada as a Preferred SourcegooglePreferred

ಕ್ಲಾಸ್‌ಮೇಟ್‌ ಹುಡುಗಿಯರ ಮುಂದೆ ಬ್ಲೂವೇಲ್ ಗೇಮ್ ಆಡುತ್ತೇವೆ ಎಂದು ತೋರಿಸಿಕೊಳ್ಳಲು ತಮ್ಮ ಕೈ ಮೇಲೆ ಬ್ಲೂವೇಲ್ ಗೇಮ್‌ನ ತಿಮಿಂಗಿಲ ಚಿತ್ರ ಬಿಡಿಸಿಕೊಂಡಿದ್ದ ವಿಚಿತ್ರ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಬೆಳಗಾವಿಯ ಕೇಂದ್ರಿಯ ವಿದ್ಯಾಲಯದ ಸುಮಾರು 25 ಮಂದಿ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ತಿಮಿಂಗಿಲ ಚಿತ್ರ ಬಿಡಿಸಿಕೊಂಡ ವಿಚಿತ್ರ ಘಟನೆ ನಡೆದಿದೆ. ಇದೆಲ್ಲಾ, ತಮ್ಮ ಸಹಪಾಠಿ ವಿದ್ಯಾರ್ಥಿನಿಯರ ಮುಂದೆ ಸ್ಟಂಟ್ ಮಾಡಲು ಎಂಬ ಅಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲರು ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಕರೆಯಿಸಿ ವಿಚಾರಿಸಿದಾಗ ಇದೊಂದು ಶೋ ಕೊಡಲು ಮಾಡಿದ ಸ್ಟಂಟ್‌ ಎಂದು ತಿಳಿದುಬಂದಿದೆ ಅಂತಾರೆ ಕೇಂದ್ರಿಯ ವಿದ್ಯಾಲಯದ ಪ್ರೀನ್ಸಿಪಾಲ್ ಕಂತಾ ಮ್ಯಾಮ್.