Asianet Suvarna News Asianet Suvarna News

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಿಧನ: ಜಾರಕಿಹೊಳಿ-ಹೆಬ್ಬಾಳ್ಕರ್‌ ವಾರ್ ಶುರು?

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವೆ ಮತ್ತೊಮ್ಮೆ ವಾರ್ ಶುರುವಾಗುತ್ತಾ?  ಮತ್ತೆ ಕಾಂಗ್ರೆಸ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಾ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ? ಯಾಕಂತೀರಾ ಇಲ್ಲಿದೆ ಫುಲ್ ಡಿಟೇಲ್ಸ್.

Belagavi PLD bank president Mahadevappa Patil passes away
Author
Bengaluru, First Published Oct 29, 2018, 5:14 PM IST
  • Facebook
  • Twitter
  • Whatsapp

ಬೆಳಗಾವಿ, [ಅ.29]:  ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣಾ ಕದನದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಬಣದಿಂದ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಹಾದೇವ್​ ಪಾಟೀಲ್ (82) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 

ಬೆಳಗಾವಿಯ ಫೂಲ್​ಬಾಗ್​ ಗಲ್ಲಿ ನಿವಾಸದಲ್ಲಿ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣೆ ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್‌ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು.

ಅಷ್ಟೇ ಅಲ್ಲದೇ ಜೆಡಿಎಸ್ ಹಾಗೂ ಕ್ರಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ನಡುಗಿಸಿತ್ತು. ಆದ್ರೆ ಈಗ ಅಧ್ಯಕ್ಷ ಮಹಾದೇವ್​ ಪಾಟೀಲ್ ಮೃತಪಟ್ಟಿರುವುದರಿಂದ ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ. 

ಇದರಿಂದ ಬೆಳಗಾವಿ ಕಾಂಗ್ರೆಸ್​ನಲ್ಲಿ ಮತ್ತೊಮ್ಮೆ ಪ್ರತಿಷ್ಠೆಯ ರಾಜಕೀಯ ನಡೆಯಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

Follow Us:
Download App:
  • android
  • ios