ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜಾರೋಹಣ ಮಾಡಲಾಗಿದೆ. ಕರ್ನಾಟಕ ಕ್ರಾಂತಿ ಪಡೆ ಕಾರ್ಯಕರ್ತರು ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಬೆಳಗಾವಿ(ನ.01): ಗಡಿ ನಾಡು ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಡಿಂಡಿಮ ಮೊಳಗಿದೆ. ಪದೇ-ಪದೇ ಕನ್ನಡ ಹಾಗೂ ಮರಾಠಿ ಭಾಷಾ ಕಾರ್ಯಕರ್ತರ ನಡುವೆ ತಿಕ್ಕಾಟ ನಡೆಯುತ್ತಿರುವ ಬೆಳಗಾವಿಯಲ್ಲಿ ಕನ್ನಡದ ಭಾವುಟ ಹಾರಾಡಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜಾರೋಹಣ ಮಾಡಲಾಗಿದೆ. ಕರ್ನಾಟಕ ಕ್ರಾಂತಿ ಪಡೆ ಕಾರ್ಯಕರ್ತರು ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಇಲ್ಲಿವರೆಗೆ ಎಂಇಎಸ್ ಕಾರ್ಯಕರ್ತರು ಕನ್ನಡ ಧ್ವಜಾರೋಹಣ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಆದರೆ ಇದೀಗ ಎಂ.ಇ.ಎಸ್ ಮೊಂಡುತನ ಮುರಿದ ಕನ್ನಡಿಗರು, ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಿಸಿದ್ದಾರೆ.