Asianet Suvarna News Asianet Suvarna News

ಬೆಳಗಾವಿ ಹೋಟೆಲ್‌ ರೂಂಗಳು ಕಲಾಪ, ಮದುವೆ ಎರಡಕ್ಕೂ ಲಭ್ಯ

ಬೆಳಗಾವಿಯಲ್ಲಿ ಅಧಿವೇಶನಕ್ಕಾಗಿ ವಸತಿಗೃಹ, ಲಾಡ್ಜ್‌ಗಳಲ್ಲಿನ ಕೋಣೆಗಳನ್ನು ಕಾದಿರಿಸುವಾಗ ವಿವಾಹ ಸಮಾರಂಭಕ್ಕೆಂದು ಈ ಮೊದಲೇ ರೂಂ ಕಾದಿರಿಸಿರುವ ಕುಟುಂಬಗಳಿಗೆ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 

Belagavi hotels available for both wedding and winter session
Author
Bengaluru, First Published Dec 5, 2018, 11:29 AM IST

ಬೆಳಗಾವಿ :  ಚಳಿಗಾಲದ ಅಧಿವೇಶನಕ್ಕಾಗಿ ವಸತಿಗೃಹ, ಲಾಡ್ಜ್‌ಗಳಲ್ಲಿನ ಕೋಣೆಗಳನ್ನು ಕಾದಿರಿಸುವಾಗ ವಿವಾಹ ಸಮಾರಂಭಕ್ಕೆಂದು ಈ ಮೊದಲೇ ರೂಂ ಕಾದಿರಿಸಿರುವ ಕುಟುಂಬ ವರ್ಗಗಳಿಗೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಅವರು ಸೂಚನೆ ನೀಡಿದ್ದಾರೆ. 

ಮದುವೆ ಮನೆಯವರು ಬುಕ್‌ ಮಾಡಿದ್ದ ಕೊಠಡಿಗಳ ಪೈಕಿ ಶೇ.50ರಷ್ಟನ್ನು ಅವರಿಗೆ ಕೊಟ್ಟು, ಉಳಿದವನ್ನು ಅಧಿವೇಶನ ಕಾರ್ಯಕ್ಕೆ ಬಳಸಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

‘ಮದುವೆ ಮೇಲೆ ಚಳಿಗಾಲ ಅಧಿವೇಶನದ ಕರಿನೆರಳು’ ತಲೆಬರಹದಡಿ ಡಿ.3ರಂದು ಪ್ರಕಟವಾದ ‘ಕನ್ನಡಪ್ರಭ’ ವರದಿಗೆ ಜಿಲ್ಲಾಡಳಿತ ಈಗ ಸ್ಪಂದನೆ ವ್ಯಕ್ತಪಡಿಸಿದೆ. ಈ ಕುರಿತು ‘ಕನ್ನಡಪ್ರಭ’ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಮದುವೆಗಾಗಿ ಮುಂಗಡ ಹಣ ನೀಡಿ ಕುಟುಂಬಸ್ಥರಿಗೆ ಬುಕ್‌ ಮಾಡಿದ್ದ ಕೊಠಡಿಗಳಲ್ಲಿನ ಕೆಲವನ್ನು ನೀಡುವಂತೆ ಸೂಚಿಸಲಾಗಿದೆ. 10-15 ಕೊಠಡಿ ಬುಕ್‌ ಮಾಡಿದ್ದವರಿಗೆ 7-8 ಕೊಠಡಿ ನೀಡಿ, ಎರಡೂ ಕಡೆಗೆ ಬ್ಯಾಲೆನ್ಸ್‌ ಮಾಡುವಂತೆ ನಿರ್ದೇಶನ ನೀಡಿದ್ದೇವೆ. ಇನ್ನೂ ಇಂತಹ ಸಮಸ್ಯೆಗೆ ಸಿಲುಕಿದ ಕುಟುಂಬಗಳು ನೇರವಾಗಿ ನಮ್ಮನ್ನು ಸಂಪರ್ಕಿಸಿದಲ್ಲಿ ಅದಕ್ಕೆ ಪರಿಹಾರ ಮಾರ್ಗಗಳನ್ನು ನೀಡಲು ಮತ್ತು ಅವರ ಸಂಕಷ್ಟಗಳಿಗೆ ಸ್ಪಂದಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ ಎಂದರು.

ಆರು ತಿಂಗಳ ಹಿಂದೆಯೇ ಮದುವೆ ದಿನ ನಿಗದಿ ಮಾಡಿಕೊಂಡು, ಸಂಬಂಧಿಕರು ಹಾಗೂ ಕುಟುಂಬ ವರ್ಗಕ್ಕಾಗಿ ಹಲವಾರು ಕೊಠಡಿಗಳನ್ನು ಕುಟುಂಬಗಳು ಬುಕ್‌ ಮಾಡಿದ್ದವು. ಆದರೆ ಅಧಿವೇಶನಕ್ಕಾಗಿ ಎಲ್ಲ ಕೊಠಡಿಗಳ ಬುಕಿಂಗ್‌ ಅನ್ನು ಜಿಲ್ಲಾಡಳಿತ ರದ್ದು ಮಾಡಿದ್ದರಿಂದ ತೊಂದರೆಯಾಗಿತ್ತು.

ಬುಕ್‌ ಮಾಡಲಾಗಿತ್ತು. ಈ ರೀತಿ ಬುಕ್‌ ಮಾಡಿದ್ದ ಶೇ.50ರಷ್ಟುಕೊಠಡಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜತೆಗೆ ಅಧಿವೇಶನಕ್ಕೆ ಆಗಮಿಸುವ ಗಣ್ಯರು ಮತ್ತು ಅತಿಥಿಗಳಿಗೆ ತೊಂದರೆ ಆಗದಂತೆ ಕ್ರಮವಹಿಸಲು ಸೂಚಿಸಿದೆ.

Follow Us:
Download App:
  • android
  • ios