Asianet Suvarna News Asianet Suvarna News

ಇವಿಎಂ ಹ್ಯಾಕ್ ಅಸಾಧ್ಯ; ಅನುಮಾನವಿದ್ದರೆ ಕೋರ್ಟ್‌ಗೆ ಹೋಗಿ

ಇವಿಎಂ, ವಿವಿಪ್ಯಾಟ್ ಹ್ಯಾಕ್ ಮಾಡಲು ಅಸಾಧ್ಯ | ಅನುಮಾನವಿದ್ರೆ ಕೋರ್ಟ್‌ಗೆ ಹೋಗಿ : ಬಿಇಎಲ್ | 

BEL clarifies EVM hack is impossible
Author
Bengaluru, First Published Jun 2, 2019, 10:02 AM IST

ಬೆಂಗಳೂರು (ಜೂ. 02): ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್‌ಗಳನ್ನು ಹ್ಯಾಕ್ ಮಾಡಲು, ಇಲ್ಲವೇ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸಂಶಯಗಳಿದ್ದರೆ ಯಾವುದೇ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಗೌತಮ ಹೇಳಿದ್ದಾರೆ.

ಲೋಕಸಭೆ ಫಲಿತಾಂಶದ ಬಳಿಕ ಹೆಚ್ಚಾಗಿರುವ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಮತ್ತು ವಿವಿಪ್ಯಾಟ್‌ಗಳ ದುರುಪಯೋಗದ ಬಗೆಗಿನ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಈ ಬಾರಿಯ ಲೋಕಸಭಾ ಚುನಾವಣೆಗೆ ಅಗತ್ಯವಿದ್ದ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಪೈಕಿ ಶೇ. 74 ರಷ್ಟು ಅಂದರೆ ಸುಮಾರು 10 ಲಕ್ಷ ಯೂನಿಟ್‌ಗಳಷ್ಟು ಯಂತ್ರಗಳನ್ನು ಬಿಇಎಲ್ ಚುನಾವಣಾ ಆಯೋಗಕ್ಕೆ ತಯಾರಿಸಿ ಕೊಟ್ಟಿತ್ತು. ಉಳಿದ ಮತಯಂತ್ರಗಳನ್ನು ಚುನಾವಣಾ ಆಯೋಗದಿಂದಲೇ ನೀಡಲಾಗಿತ್ತು.

ಈ ಮತಯಂತ್ರಗಳನ್ನು ಹ್ಯಾಕ್ ಮಾಡಿ ತೋರಿಸುವಂತೆ ಚುನಾವಣೆಗೂ ಮುನ್ನ ಆಯೋಗ ಅವಕಾಶ ನೀಡಿತ್ತು. ಯಾರೂ ಮುಂದೆ ಬರಲಿಲ್ಲ. ಚುನಾವಣೆ ಬಳಿಕ ರಾಜಕೀಯ ಪಕ್ಷಗಳಿಂದ ವಿವಿಧ ಅಭಿಪ್ರಾಯಗಳು ಬರುತ್ತಿರಬಹುದು. ಈಗಲೂ ಕೂಡ ಯಾವುದೇ ಅಭ್ಯರ್ಥಿ ಫಲಿತಾಂಶ ಬಂದ 45 ದಿನಗಳೊಳಗೆ ನ್ಯಾಯಾಲಯದ ಮೊರೆ ಹೋಗಿ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಪರಿಶೀಲನೆ ಮಾಡಿಸಲು ಅವಕಾಶವಿದೆ ಎಂದು ವಿವರಿಸಿದರು.

Follow Us:
Download App:
  • android
  • ios