ಬೀಜಿಂಗ್’ನಲ್ಲಿ ಒಂದು ಬಾರಿ 10ಕ್ಕಿಂತ ಹೆಚ್ಚು ವಿದೇಶಿಗರಿಗೆ ಬಾರ್ ಪ್ರವೇಶವಿಲ್ಲ

news | Thursday, March 15th, 2018
Suvarna Web Desk
Highlights

ಬೀಜಿಂಗ್ ಬಾರ್ ಅಂಡ್ ರೆಸ್ಟೋರೆಂಟ್ ಓನರ್’ಗಳಿಗೆ ಬೀಜಿಂಗ್ ಪೊಲೀಸರು ಒಂದು ಬಾರಿ 10ಕ್ಕಿಂತ ಹೆಚ್ಚು ಮಂದಿ ವಿದೇಶಿಗರಿಗೆ ಪ್ರವೇಶವನ್ನು ನೀಡದಂತೆ ಸೂಚನೆ ನೀಡಿದ್ದಾರೆ. 

ಬೀಜಿಂಗ್ : ಬೀಜಿಂಗ್ ಬಾರ್ ಅಂಡ್ ರೆಸ್ಟೋರೆಂಟ್ ಓನರ್’ಗಳಿಗೆ ಬೀಜಿಂಗ್ ಪೊಲೀಸರು ಒಂದು ಬಾರಿ 10ಕ್ಕಿಂತ ಹೆಚ್ಚು ಮಂದಿ ವಿದೇಶಿಗರಿಗೆ ಪ್ರವೇಶವನ್ನು ನೀಡದಂತೆ ಸೂಚನೆ ನೀಡಿದ್ದಾರೆ. 

ಚೀನಾ ಸರ್ಕಾರದೊಂದಿಗೆ ಸಭೆಯನ್ನು ನಡೆಸಿದ ಬಳಿಕ  ಆದೇಶವನ್ನು ಹೊರಡಿಸಲಾಗಿದೆ. ಈ ಸಭೆಯಲ್ಲಿ ಚೀನಾ ಕಮ್ಯುನಿಸ್ಟ್ ಪಾರ್ಟಿಯ   ಅನೇಕ ಸದಸ್ಯರೂ ಹಾಜರಿದ್ದು, ಈ ಆದೇಶಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಆದರೆ ಈ ಆದೇಶ ಶುಕ್ರವಾರ ಮತ್ತು ಶನಿವಾರಗಳಿಗೆ ಮಾತ್ರವೇ ಅನ್ವಯವಾಗಲಿದ್ದು, ಬೇರೆ ದಿನಗಳಿಗೆ ಅನ್ವಯಿಸುವುದಿಲ್ಲ. ಒಂದು ವೇಳೆ 10ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರನ್ನು ಬಿಟ್ಟಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Comments 0
Add Comment

    About 300 Indians Stranded in Shanghai As Air India Cancels Flight

    video | Sunday, April 1st, 2018
    Suvarna Web Desk