ವಾಸಿಸುವ ಉದ್ದೇಶವಾಗಿರಲಿ ಅಥವಾ ಹೂಡಿಕೆ ಉದ್ದೇಶವಾಗಿರಲಿ, ಪ್ರತಿಯೊಬ್ಬನೂ ಸ್ವಂತ ಮನೆಯೊಂದನ್ನು ಹೊಂದುವ ಆಸೆ ಹೊಂದಿರುತ್ತಾನೆ. ಆದರೆ, ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ, ಆಸ್ತಿ ಖರೀದಿಸುವುದು ಸುಲಭ ಕೆಲಸವಲ್ಲ. ಅದಕ್ಕಾಗಿ ಸಾಮಾನ್ಯವಾಗಿ ಗೃಹಸಾಲ ಪಡೆಯಲಾಗುತ್ತದೆ.
ವಾಸಿಸುವ ಉದ್ದೇಶವಾಗಿರಲಿ ಅಥವಾ ಹೂಡಿಕೆ ಉದ್ದೇಶವಾಗಿರಲಿ, ಪ್ರತಿಯೊಬ್ಬನೂ ಸ್ವಂತ ಮನೆಯೊಂದನ್ನು ಹೊಂದುವ ಆಸೆ ಹೊಂದಿರುತ್ತಾನೆ. ಆದರೆ, ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ, ಆಸ್ತಿ ಖರೀದಿಸುವುದು ಸುಲಭ ಕೆಲಸವಲ್ಲ. ಅದಕ್ಕಾಗಿ ಸಾಮಾನ್ಯವಾಗಿ ಗೃಹಸಾಲ ಪಡೆಯಲಾಗುತ್ತದೆ.
ಈಗ ಗೃಹಸಾಲ ಪಡೆಯುವುದು ಹಿಂದಿನಂತೆ ಕ್ಲಿಷ್ಟಕರವಾಗಿಲ್ಲ. ನೀವು ಮನೆಯಲ್ಲೇ ಕೂತು ಗೃಹಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇಂಟರ್ನೆಟ್ ಮೂಲಕವೇ ವಿವಿಧ ಗೃಹಸಾಲ ಯೋಜನೆಗಳನ್ನು ತುಲನೆ ಮಾಡಿ, ನಿಮಗೆ ಸೂಕ್ತವಾದ ಬಡ್ಡಿದರ ಹಾಗೂ ಮರುಪಾವತಿ ನಿಯಮಗಳನ್ನು ತಿಳಿದುಕೊಂಡ ಬಳಿಕ ನಿರ್ಧಾರ ಕೈಗೊಳ್ಳಬಹುದಾಗಿದೆ.
ಗೃಹಸಾಲದ ಅರ್ಜಿಯನ್ನು ಹಾಗೂ ಅರ್ಜಿದಾರರನ ಸಾಲ ಪಡೆಯುವವನ ಮರುಪಾವತಿಸುವ ಅರ್ಹತೆಯನ್ನು ಅಳೆಯಲು ಎಲ್ಲಾ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ತಮ್ಮದೇ ಮಾನದಂಡಗಳನ್ನು ಹೊಂದಿವೆ. ಸಾಲ ಮಂಜೂರು ಮಾಡುವ ಮುನ್ನ ಬ್ಯಾಂಕುಗಳು ಆಸ್ತಿ ಮಾಲಕ ಹಾಗೂ ಬಿಲ್ಡರ್’ನ ಪ್ರೊಫೈಲ್’ಗಳನ್ನು ಕೂಡಾ ಪರೀಕ್ಷಿಸುತ್ತವೆ. ಆದುದರಿಂದ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಕೆಲವೊಂದು ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು.
ಕ್ರೆಡಿಟ್ಸ್ಕೋರ್’ನಮಹತ್ವ:
ಸಾಲ ಪಡೆದವನ ಮರುಪಾವತಿಸುವ ಪರಿಪಾಠ ಹಾಗೂ ಇಡೀ ಚರಿತ್ರೆಯನ್ನು ಕ್ರೆಡಿಟ್ ಸ್ಕೋರ್ ಪ್ರತಿಫಲಿಸುತ್ತದೆ. ಪ್ರಸಕ್ತ ದಿನಗಳಲ್ಲಿ ಯಾರ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿದೆಯೋ ಅಂಥವರಿಗೆ ಮಾತ್ರ ಬ್ಯಾಂಕುಗಳು ಸಾಲವನ್ನು ಸುಲಭವಾಗಿ ನೀಡುತ್ತವೆ. ಕ್ರೆಡಿಟ್ ಸ್ಕೋರ್ ಅದಕ್ಕಿಂತ ಕಡಿಮೆಯಿದ್ದರೆ, ಅದುವೇ ಅಂತಿಮವೆಂದು ಭಾವಿಸಬೇಕಾಗಿಲ್ಲ. ಅದಾಗ್ಯೂ ಬ್ಯಾಂಕುಗಳು ಸಾಲವನ್ನು ನೀಡುತ್ತವೆ, ಆದರೆ ಅದಕ್ಕೆ ಕಠಿಣ ಶರತ್ತುಗಳನ್ನು ವಿಧಿಸುತ್ತವೆ.
ನಿಮ್ಮ ಕ್ರೆಡಿಟ್ ಸ್ಕೋರ್ ಬಹಳ ಕಳಪೆಯಾಗಿದ್ದರೆ ಬ್ಯಾಂಕುಗಳು ಸಾಲವನ್ನು ನಿರಾಕರಿಸುತ್ತವೆ. ಒಂದು ವೇಳೆ ನಿಮಗೆ ಸಾಲ ನಿರಾಕರಿಸಲ್ಪಟ್ಟಲ್ಲಿ, ಸಾಲಕ್ಕಾಗಿ ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ. ಆ ರೀತಿ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಇನ್ನೂ ಕೆಳಗಿಳಿಯುವ ಸಾಧ್ಯತೆಗಳಿರುತ್ತವೆ. ಬದಲಾಗಿ ಕ್ರೆಡಿಟ್ ಸ್ಕೋರ್’ನ್ನು ಹೇಗೆ ಉತ್ತಮಪಡಿಸಬಹುದು ಎಂಬುವುದರ ಕಡೆ ಗಮನ ಹರಿಸಿ. (ಅದಕ್ಕಾಗಿ, ನೀವು ಹಳೆಯ ಸಾಲವನ್ನು ತೀರಿಸುವುದು, ಕ್ರೆಡಿಟ್ ಕಾರ್ಡ್ ಬಾಕಿಯನ್ನು ನಿಗದಿತ ಸಮಯದಲ್ಲಿ ಪಾವತಿಸುವುದು ಮುಂತಾದವುಗಳನ್ನು ಮಾಡಬೇಕು).
ಅರ್ಹತಾಮಾನದಂಡಗಳುಹಾಗೂದಾಖಲೆಗಳು
ಪ್ರತಿಯೊಂದು ಗೃಹಸಾಲ ಯೋಜನೆಗೆ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ವಯಸ್ಸು, ಆದಾಯ, ವೃತ್ತಿ ಇತ್ಯಾದಿಗಳನ್ನು ಅದು ಅವಲಂಬಿಸಿರುತ್ತದೆ. ಆ ಮಾನದಂಡಗಳಿಗೆ ಸರಿಹೊಂದದ ಪಕ್ಷದಲ್ಲಿ ಬ್ಯಾಂಕು/ಸಂಸ್ಥೆಗಳು ಸಾಲವನ್ನು ನಿರಾಕರಿಸುತ್ತವೆ ಅಥವಾ ಕಠಿಣ ಶರತ್ತುಗಳೊಂದಿಗೆ ಸಾಲವನ್ನು ಮಂಜೂರು ಮಾಡುತ್ತವೆ.
ಸಾಲಮೊತ್ತಹಾಗೂಮರುಪಾವತಿ ಅವಧಿ
ಸಾಮಾನ್ಯವಾಗಿ ಬ್ಯಾಂಕುಗಳು ಅರ್ಜಿದಾರನ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಆಸ್ತಿಯ ಒಟ್ಟು ಮೌಲ್ಯದ ಶೇ.70-ಶೇ.90 ಮೊತ್ತವನ್ನುಸಾಲವಾಗಿ ನೀಡುತ್ತವೆ. ಉಳಿದ ಮೊತ್ತವನ್ನು ಅರ್ಜಿದಾರನೇ ಭರಿಸಬೇಕಾಗುತ್ತದೆ. NBFC ಮತ್ತು HFCಗಳು ಹೆಚ್ಚು ಮೊತ್ತವನ್ನು ಒದಗಿಸಬಹುದು. ಅರ್ಜಿದಾರನ ವಯಸ್ಸಿಗೆ ಅನುಗುಣವಾಗಿ ಸಾಲದ ಅವಧಿಯು 20 ರಿಂದ 30 ವರ್ಷವಾಗಿರುತ್ತದೆ. ಮರುಪಾವತಿಯ ಅವಧಿ ಹೆಚ್ಚಿದ್ದಷ್ಟು, ಕಂತಿನ ಮೊತ್ತ ಕಡಿಮೆಯಾಗುತ್ತದೆ; ಆದರೆ ದೀರ್ಘಾವಧಿ ಮರುಪಾವತಿ ಯೋಜನೆಯಲ್ಲಿ ಬಡ್ಡಿ ಮೊತ್ತವು ಹೆಚ್ಚಾಗಿರುತ್ತದೆ. ನಿಮ್ಮ ಆದಾಯ ಹಾಗೂ ಮರುಪಾವತಿ ಮೊತ್ತಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಸಾಲ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಒಮ್ಮೆ ಸಾಲ ಮಂಜೂರು ಆದ ಬಳಿಕ, ನಿಗದಿತ ಪ್ರಧಾನ ಮೊತ್ತವನ್ನು ಪೂರ್ವ-ಪಾವತಿ ಮಾಡುವ ಮೂಲಕ ಬಡ್ಡಿ ಮೊತ್ತವನ್ನು ಕಡಿಮೆಗೊಳಿಸಬಹುದು.
ಗೃಹಸಾಲಬಡ್ಡಿದರ:
ನೀವು ಸಾಲ ಪಡೆದರೆ, ಅದಕ್ಕೆ ಬಡ್ಡಿಯನ್ನು ಭರಿಸಲೇ ಬೇಕಾಗುತ್ತದೆ. ಫಿಕ್ಸೆಡ್ ಹಾಗೂ ಫ್ಲೋಟಿಂಗ್ ಎಂಬ 2 ವಿಧದ ಗೃಹಸಾಲಗಳು ಚಾಲ್ತಿಯಲ್ಲಿವೆ. ಫಿಕ್ಸೆಡ್ ಮಾದರಿಯಲ್ಲಿ ಅವಧಿ ಮುಗಿಯುವವರೆಗೂ ಬಡ್ಡಿ ದರ ಒಂದೇ ತೆರನಾಗಿರುತ್ತದೆ. ಆದರೆ ಫ್ಲೋಟಿಂಗ್ ಮಾದರಿಯಲ್ಲಿ ಬಡ್ಡಿದರ ಮ್ಯಾಕ್ರೋಇಕನಾಮಿಕ್ಸ್ ಅಂಶಗಳ ಆಧಾರದಲ್ಲಿ ಬದಲಾಗುತ್ತಿರುತ್ತದೆ. ಫ್ಲೋಟಿಂಗ್ ಬಡ್ಡಿದರಗಳು MCLR ಸಂಯೋಜಿತವಾಗಿರುತ್ತವೆ. NBFC ಮತ್ತು HFC ಗಳು PLRಗೆ ಸಂಯೋಜಿತ ಬಡ್ಡಿದರಗಳನ್ನು ವಿಧಿಸುತ್ತದೆ. ದರಗಳು ಬದಲಾದಂತೆ ಸಮಾನ ಮಾಸಿಕ ಕಂತು (EMI) ಮೊತ್ತವೂ ಕೂಡಾ ಬದಲಾಗುತ್ತದೆ.
ಕಂತುಹಾಗೂಕಂತಿನಪೂರ್ವ-ಪಾವತಿ
ಸಾಲ ಮರುಪಾವತಿಸಲು ಪ್ರತಿ ತಿಂಗಳು ಕಟ್ಟುವ ಮೊತ್ತವೇ ಸಮಾನ ಮಾಸಿಕ ಕಂತು (EMI) ಆಗಿದೆ. ಗೃಹ ಸಾಲದ ಮೇಲಿನ ಬಡ್ಡಿಗನುಸಾರವಾಗಿ ಈ ಮೊತ್ತವು ನಿಗದಿಪಡಿಸಲಾಗುತ್ತದೆ. ಮನೆಯು ನಿರ್ಮಾಣ ಹಂತದಲ್ಲಿದ್ದರೆ ಬ್ಯಾಂಕು/ಸಂಸ್ಥೆಗಳು ಸಾಲಮೊತ್ತವನ್ನು ಕಾಮಗಾರಿಯ ಪ್ರಗತಿಗೆ ಅನುಸಾರವಾಗಿ ಹಂತಹಂತಾಗಿ ಬಿಡುಗಡೆ ಮಾಡುತ್ತಾರೆ. ಆಗ ಸಾಲ ಪಡೆದವರು ಅದಕ್ಕೆ ತಕ್ಕಂತೆ ಕಂತಿನ ಪೂರ್ವ-ಪಾವತಿ ಮಾಡಬೇಕು.
ಗೃಹಸಾಲದಪೂರ್ವ-ಪಾವತಿ:
ನಿಮಗೆ ಬೋನಸ್ ರೂಪದಲ್ಲಿ ಅಥವಾ ಇನ್ನಾವುದೋ ರೂಪದಲ್ಲಿ ದೊಡ್ಡ ಮೊತ್ತದ ಹಣ ಬಂದರೆ, ಅದನ್ನು ಗೃಹಸಾಲ ಪೂರ್ವ-ಪಾವತಿಗಾಗಿ ಬಳಸಿಕೊಳ್ಳಿ. ಈ ರೀತಿ ಪೂರ್ವ-ಪಾವತಿ ಮಾಡುವುದು ಒಳ್ಳೆಯ ಅಭ್ಯಾಸವೂ ಆಗಿದೆಯಲ್ಲದೇ, ನಿಮ್ಮ ಸಾಲದ ಅವಧಿಯನ್ನು ಕಡಿತಗೊಳಿಸಬಹುದು ಹಾಗೂ ಬಡ್ಡಿಯ ಹೊಣೆಯನ್ನೂ ಇಳಿಸಬಹುದು.
ತೆರಿಗೆಉಳಿತಾಯ:
ಪ್ರಧಾನ ಸಾಲ ಮೊತ್ತದ ಮೇಲೆ, ಸೆ.80ಸಿಯನ್ವಯ ₹. 1.50 ಸಾವಿರವರೆಗೂ, ಸೆ.24ಬಿಯನ್ವಯ ₹.2 ಲಕ್ಷದವರೆಗೂ ತೆರಿಗೆಯನ್ನು ಉಳಿಸಬಹುದು.

ಆಧಿಲ್ ಶೆಟ್ಟಿ,
ಸಿಇಓ -ಬ್ಯಾಂಕ್ ಬಝಾರ್
[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]
