ಇದಕ್ಕೆ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಇಲಾಖೆ ಅನುಮತಿ ನೀಡಿದರೆ ಭಾರತೀಯ ಪರಂಪರೆ ಅವಹೇಳನ ಮಾಡಿದಂತಾಗುತ್ತದೆ. ಈ ಬಗ್ಗೆ ಪ್ರಧಾನಿ ಕಚೇರಿಗೆ ದೂರು ನೀಡಲಾಗಿತ್ತು.

ಬೆಂಗಳೂರು(ಜೂ.24): ನಾಳೆ ಬೆಂಗಳೂರಿನ ವೈಟ್ ಫಿಲ್ಡ್‌ನ ವಾಣಿಜ್ಯ ಮಳಿಗೆಯೊಂದರಲ್ಲಿ ಬಿಯರ್‌ ಯೋಗ ಹಮ್ಮಿಕೊಳ್ಳಲಾಗಿತ್ತು. ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದು ಎಂದು ಯೋಗ ಶಿಕ್ಷಕರು ಹಾಗೂ ಯೋಗ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಬಿಯರ್ ಯೋಗ ರದ್ದಾಗಿದೆ.

ಬಿಐಆರ್‌ ಎಂಬ ಕಂಪನಿಯು ತನ್ನ ಪ್ರಚಾರಕ್ಕಾಗಿ ಯೋಗದ ಹೆಸರಿನಲ್ಲಿ ಇಂಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ. ಇಂಥ ಕಾರ್ಯಕ್ರಮಕ್ಕೆ ಅನುಮತಿ ನೀಡಿದವರು ಯಾರು ಎಂದು ದೂರುದಾರರು ಪ್ರಶ್ನಿಸಿದ್ದರು. ಈ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ತಲಾ 700 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು.ಇದಕ್ಕೆ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಇಲಾಖೆ ಅನುಮತಿ ನೀಡಿದರೆ ಭಾರತೀಯ ಪರಂಪರೆ ಅವಹೇಳನ ಮಾಡಿದಂತಾಗುತ್ತದೆ. ಈ ಬಗ್ಗೆ ಪ್ರಧಾನಿ ಕಚೇರಿಗೆ ದೂರು ನೀಡಲಾಗಿತ್ತು.

ಏನಿದು ಬಿಯರ್ ಯೋಗ

ಬಿಯರ್ ಕುಡಿಯುತ್ತಾ ಯೋಗ ಮಾಡುವುದು ಬಿಯರ್ ಯೋಗದ ಉದ್ದೇಶ. ಬಿಯರ್​​ ಬಾಟಲ್​ಗಳ ಜೊತೆ ಯೋಗದ ಭಂಗಿ ಮಾಡುವುದು. ಯೋಗ ಮಾಡುವಾಗ ಬಿಯರ್ ಬಾಟಲ್'ಗಳನ್ನು ತಲೆ ಮೇಲಿಟ್ಟುಕೊಳ್ಳಬೇಕು. ಈ ಸಂದರ್ಭದಲ್ಲಿ ಬಿಯರ್​ ಬಾಟಲ್​​ ಕೆಳಗೆ ಬೀಳಬಾರದು. ದೇಹದ ಸಮತೋಲನ ಕಾಪಾಡಿಕೊಳ್ಳುವ ಉದ್ದೇಶ ಈ ಯೋಗದಂತೆ. ಜರ್ಮನಿಯಲ್ಲಿ ಮೊದಲು ಪ್ರಾರಂಭವಾಗಿದ್ದು, ಇದೀಗ ಆಸ್ಟ್ರೇಲಿಯಾ ಹಾಗೂ ಥೈಲೆಂಡ್​​ನಲ್ಲಿ ಬಹು ಜನಪ್ರಿಯವಾಗಿದೆ. ಆದರೆ ಭಾರತದಲ್ಲಿ ಈ ಯೋಗಕ್ಕೆ ವಿರೋಧ ವ್ಯಕ್ತವಾಗಿದೆ.