ಉತ್ತರ ಪ್ರದೇಶ ಅಂದರೆ ನೆನಪಿಗೆ ಬರೋದು ಸೈಕಲ್'ಗೆ ಕಿತ್ತಾಡಿದ ಅಪ್ಪ ಮಗ. ಒಂದೇ ಪಕ್ಷದಲ್ಲಿದ್ದು ಕಚ್ಚಾಡಿದ ಸೋದರರು. ಆದರೆ ಈಗ ಉತ್ತರ ಪ್ರದೇಶ ಅಂದರೆ ನೆನಪಿಟ್ಟುಕೊಳ್ಳಬೇಕಾದ ಸಂಗತಿಯೊಂದು ಧಿಡೀರನೆ ಹುಟ್ಟಿಕೊಂಡಿದೆ
ಉತ್ತರಪ್ರದೇಶದಲ್ಲಿ ಸೈಕಲ್ ಕಿತ್ತಾಟ, ದಾಯಾದಿ ಕಲಹ ಎಲ್ಲವೂ ಹಳೇ ಸುದ್ದಿ. ಈಗೇನಿದ್ದರೂ ಸೌಂದರ್ಯದ ಬಗ್ಗೇನೇ ಚರ್ಚೆ ಜೋರು. ಈ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್'ನ ಪ್ರಿಯಾಂಕ ವಾದ್ರಾ ಹಾಗೂ ಬಿಜೆಪಿಯ ಸ್ಮೃತಿ ಇರಾನಿ. ಅಸಲಿಗೆ ಪ್ರಿಯಾಂಕಗಿಂತಲೂ ಸ್ಮೃತಿ ಬಲು ಸುಂದರವಾಗಿದ್ದಾರಂತೆ. ಹೀಗಂತ ಸೌಂದರ್ಯ ಉಪಾಸನೆ ಮಾಡಿದ್ದು ಖುದ್ದು ಬಿಜೆಪಿಯ ಸಂಸದ.
ಉತ್ತರ ಪ್ರದೇಶ ಅಂದರೆ ನೆನಪಿಗೆ ಬರೋದು ಸೈಕಲ್'ಗೆ ಕಿತ್ತಾಡಿದ ಅಪ್ಪ ಮಗ. ಒಂದೇ ಪಕ್ಷದಲ್ಲಿದ್ದು ಕಚ್ಚಾಡಿದ ಸೋದರರು. ಆದರೆ ಈಗ ಉತ್ತರ ಪ್ರದೇಶ ಅಂದರೆ ನೆನಪಿಟ್ಟುಕೊಳ್ಳಬೇಕಾದ ಸಂಗತಿಯೊಂದು ಧಿಡೀರನೆ ಹುಟ್ಟಿಕೊಂಡಿದೆ.
ಇವರಿಬ್ಬರ ಸೌಂದರ್ಯವನ್ನ ಓರೆಗೆ ಹಚ್ಚಿದ್ದು ಬಿಜೆಪಿ ಸಂಸದ ವಿನಯ್ ಕಟಿಯಾರ್. ಕಾಂಗ್ರೆಸ್ ಸ್ಟಾರ್ ಪ್ರಚಾರಿಕಯರ ಲಿಸ್ಟ್ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಪ್ರಿಯಾಂಕ ಗಾಂಧಿ ಕೂಡ ಒಬ್ಬರು. ಆದರೆ ಕಾಂಗ್ರೆಸ್'ನ ಪ್ರಿಯಾಂಕ ಗಾಂಧಿಗಿಂತಲೂ, ಬಿಜೆಪಿಯ ಸ್ಮೃತಿ ಇರಾನಿಯೇ ಸುಂದಾರಾಂಗಿಯಂತೆ. ಸ್ಮೃತಿ ಪ್ರಚಾರಕ್ಕಿಳಿದರೆ ಬೆಂಬಲಿಗರ ದಂಡೇ ಅವರ ಹಿಂದೆ ಬರುತ್ತಂತೆ.
ಪ್ರಿಯಾಂಕ ಪ್ರಚಾರಕ್ಕೆ ಬಂದ್ರೆ ಕಾಂಗ್ರೆಸ್‍ನಲ್ಲೇನು ಪವಾಡ ನಡೆಯೊಲ್ಲ ಎಂದು ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದನ ಹೇಳಿಕೆ ತೀವ್ರ ಸಂಚಲನವನ್ನೇ ಸೃಷ್ಟಿಸಿದೆ. ಸ್ವತಃ ಪ್ರಿಯಾಂಕ ಪತಿಯೇ ಕಿಡಿ ಕಾರಿದ್ದೂ, ವಿನಯ್ ಕಟಿಯಾರ್ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.
ಶರದ್ ಯಾದವ್ ಈ ವಿವಾದಾತ್ಮಕ ಹೇಳಿಕೆಗೆ ಮಹಿಳಾ ಆಯೋಗ ನೋಟಿಸ್ ಕೂಡ ನೀಡಿದೆ. ದುರಂತ ಏನ್ ಗೊತ್ತಾ, ಶರದ್ ಯಾದವ್'ರ ಈ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಲು ಬಂದ ಸಂಸದ ವಿನಯ್ ಕಟಿಯಾರ್, ತಾವೇ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.
