ನಾಲ್ಕು ವರ್ಷದ ಕರಡಿಯೊಂದು ಪಾಳು ಬಾವಿಗೆ ಬಿದ್ದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು ಅರಿವಳಿಕೆ ಮದ್ದಿನ ಕೊರತೆಯಿಂದಾಗಿ ಮೇಲೆತ್ತುವ ಕಾರ್ಯ ವಿಳಂಬವಾಗಿದೆ.

ಪಾವಗಡ (ಜ.31): ನಾಲ್ಕು ವರ್ಷದ ಕರಡಿಯೊಂದು ಪಾಳು ಬಾವಿಗೆ ಬಿದ್ದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು ಅರಿವಳಿಕೆ ಮದ್ದಿನ ಕೊರತೆಯಿಂದಾಗಿ ಮೇಲೆತ್ತುವ ಕಾರ್ಯ ವಿಳಂಬವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾತ್ರಿ 12 ರ ಸುಮಾರಿನಲ್ಲಿ ಆಹಾರ ಅರಸಿ ಬಂದ ಕರಡಿ ಗ್ರಾಮದ ಈರಣ್ಣ ಎಂಬವರ ತೋಟದ ಪಾಳು ಬಾವಿಗೆ ಬಿದ್ದಿದೆ. ಮೇಲೆ ಬರಲು ಯತ್ನಿಸಿದೆಯಾದರೂ ಸಫಲವಾಗಿಲ್ಲ. ಅರಿವಳಿಕೆ ಮದ್ದಿನ ಕೊರತೆಯಿಂದ ಕಾರ್ಯಾಚರಣೆಗೆ ವಿಳಂಬವಾಗಿದ್ದು, ಬೆಂಗಳೂರಿನ ಬನ್ನೇರುಘಟ್ಟದ ವಲಯಾರಣ್ಯಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿಲಾಗಿದೆ. ಚುಚ್ಚುಮದ್ದು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.