ರಾಜ್ಯ ಬಿಜೆಪಿಯಲ್ಲಿರುವ ಒಳಜಗಳವನ್ನು ಕಡಿಮೆ ಮಾಡಿ ಎಂದು ಪ್ರಧಾನಿ ಪರೋಕ್ಷವಾಗಿ ಬಿಎಸ್‌ವೈ, ಈಶ್ವರಪ್ಪಗೆ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ (ಮಾ.31): ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಬಗ್ಗೆ ಪ್ರಧಾನಿ ಇಂದು ರಾಜ್ಯ ಸಂಸದರೊಂದಿಗೆ ಚರ್ಚೆ ನಡೆಸಿದರು.
ಕೇಂದ್ರದ ಯೋಜನೆಗಳ ಬಗ್ಗೆ ತಮ್ಮ ಕ್ಷೇತ್ರದ ಜನರಿಗೆ ಮಾಹಿತಿ ನೀಡಿ, ಬೂತ್ ಮಟ್ಟದಲ್ಲಿ ಕೆಲಸ ಆರಂಭಿಸುವಂತೆ ಸೂಚಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿರುವ ಒಳಜಗಳವನ್ನು ಕಡಿಮೆ ಮಾಡಿ ಎಂದು ಪ್ರಧಾನಿ ಪರೋಕ್ಷವಾಗಿ ಬಿಎಸ್ವೈ, ಈಶ್ವರಪ್ಪಗೆ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯಲ್ಲಿ ಓರ್ವ ಸಿಎಂ ಆಗಿ ಪ್ರಮಾಣ ವಚನ ಮಾಡುವ ಮೊದಲೆ ಓರ್ವ ವಿರೋಧ ಪಕ್ಷದ ನಾಯಕ ತಯಾರಾಗಿರುತ್ತಾರೆ ಎಂದು ಪ್ರಧಾನಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ತಮ್ಮ ಕ್ಷೇತ್ರದ ಉಸ್ತುವಾರಿಗಳ ಜೊತೆ ನೇರ ಸಂರ್ಪಕದಲ್ಲಿ ಇಟ್ಟುಕೊಂಡು 2018 ಮತ್ತು 2019ರ ಚುನಾವಣೆಗೆ ತಯಾರಿ ಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.
