ನಿಮಗೆ ಸಾಲ ಬೇಕೆ? ಹಾಗಾದ್ರೆ ಜೋಕೆ. ಯಾರಾದ್ರೂ ಸುಲಭವಾಗಿ, ಕ್ವಿಕ್ ಆಗಿ ಸಾಲ ಕೊಡ್ತಾರೆ ಅಂತ ಹೇಳಿದ್ರೆ ಜೋಕೆ! ಅವರು ನಿಮಗೆ ಸಾಲ ಕೊಡೋ ಬದಲು ನಿಮಗೆ ಪಂಗನಾಮ ಹಾಕಿ ಶೂಲಕ್ಕೇರಿಸ್ತಾರೆ.
ಶಿವಮೊಗ್ಗ (ಸೆ.20): ನಿಮಗೆ ಸಾಲ ಬೇಕೆ? ಹಾಗಾದ್ರೆ ಜೋಕೆ. ಯಾರಾದ್ರೂ ಸುಲಭವಾಗಿ, ಕ್ವಿಕ್ ಆಗಿ ಸಾಲ ಕೊಡ್ತಾರೆ ಅಂತ ಹೇಳಿದ್ರೆ ಜೋಕೆ! ಅವರು ನಿಮಗೆ ಸಾಲ ಕೊಡೋ ಬದಲು ನಿಮಗೆ ಪಂಗನಾಮ ಹಾಕಿ ಶೂಲಕ್ಕೇರಿಸ್ತಾರೆ.
ಶಿವಮೊಗ್ಗದ ಮಲವಗೊಪ್ಪ ಗ್ರಾಮದ ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟ್ ಅಫೀಸರ್ ಅಗಿದ್ದ ಜಗದೀಶ್ ಎಂಬುವರಿಗೆ ಸಾಲದ ಹೆಸರಲ್ಲಿ ಮೂರು ನಾಮ ಬಿದ್ದಿದೆ. ಕ್ವಿಕ್ ಲೋನ್ ಹೆಸರಿನಲ್ಲಿ ಖದೀಮರು ಈತನಿಂದಲೇ ಲಕ್ಷಾಂತರ ರೂ. ಪೀಕಿದ್ರು. ಈಗ ಅತ್ತ ಸಾಲವೂ ಸಿಗಲಿಲ್ಲ, ಇತ್ತ ಇರುವ ಸಾಲವೂ ದುಪ್ಪಟ್ಟಾಗಿ ಕಂಗಾಲಾಗಿ ಅಕೌಂಟ್ ಅಫೀಸರ್ ಬಕರಾ ಆಗಿದ್ದಾನೆ. ಅಂದಹಾಗೆ ಈತನಿಗೆ ಅರ್ಜೆಂಟಾಗಿ ಸಾಲ ಬೇಕಾಗಿತ್ತು. ಹೀಗಿರುವಾಗ ಕಳೆದ 20 ದಿನಗಳ ಹಿಂದೆ ಇವರ ಮೊಬೈಲ್ ಗೆ ಕರೆ ಬಂದಿತ್ತು. ಅತ್ತ ಕಡೆಯಿಂದ ಯುವತಿಯೊಬ್ಬಳು ಹಿಂದಿಯಲ್ಲಿ ಮಾತನಾಡಿ ಕೇವಲ 2 ಪರ್ಸೆಂಟ್ ಗೆ ಲೋನ್ ಕೊಡುವುದಾಗಿ ಹೇಳಿದಳು. ಅಲ್ಲದೆ ತಕ್ಷಣ 8 ಸಾವಿರ ರೂ. ಹಾಕಿ ಮ್ಯೂಚ್ಯೂಯಲ್ ಫಂಡ್ ಅಕೌಂಟ್ ಗೆ ಹಾಕುವಂತೆ ಹೇಳಿದ್ದಾಳೆ. ಮೊದಲು ಲೋನ್ ಪೇಪರ್ ಕ್ಲಿಯರೆನ್ಸ್'ಗೆ ಅಕೌಂಟ್'ಗೆ ಹಣ ಹಾಕಿಸಿ ಕೊಳ್ಳಲಾಯಿತು. ನಂತರ 2 ಲಕ್ಷ ಲೋನ್ ಬೇಕಾದರೇ ಮೊದಲ 3 ಕಂತಿನ ಹಣ ಪಾವತಿ ಮಾಡಿ, ನಂತರ ವಿಮೆ ಮಾಡಿಸಲು ನಾನಾ ಸಬೂಬು ನೀಡಿದ್ದಾಳೆ. ಈ ಖದೀಮರ ವಿರುದ್ಧ ಪೋಲಿಸ್ ಠಾಣೆಗೆ ಹೋದರೇ ನೀನು ಹಣ ಕೊಟ್ಟು ಬಕರಾ ಆಗೀದ್ದೀಯಾ ಎಂದು ಪೊಲೀಸರೇ ಲೇವಡಿ ಮಾಡಲಾರಂಭಿಸಿದರು. ಕೊನೆಗೆ ಶಿವಮೊಗ್ಗ ಸೈಬರ್ ಕ್ರೈಂ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
