ಬೆಂಗಳೂರು [ಜು.3] :  ಸಂಚಾಯ ನಿಮಯ ಉಲ್ಲಂಘಿಸಿದ ವಾಹನಗಳ ಟೋಯಿಂಗ್‌ ಮಾಡುವಾಗ ವಾಹನಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಿ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರು ಟೋಯಿಂಗ್‌ ಸಿಬ್ಬಂದಿಗೆ ಸೂಚಿಸಿದ್ದಾರೆ.

ವಾಹನಗಳನ್ನು ಟೋಯಿಂಗ್‌ ಮಾಡುವ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ವಿರುದ್ಧ ಹೆಚ್ಚುವರಿ ಸಂಚಾರ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಅವರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಸ್ವತಃ ಆಯುಕ್ತರು ನಗರದ 16 ಠಾಣಾ ವ್ಯಾಪ್ತಿಯಲ್ಲಿರುವ ಟೋಯಿಂಗ್‌ ಏಜೆನ್ಸಿ ಸಿಬ್ಬಂದಿಯ ಪರೇಡ್‌ ನಡೆಸಿದರು.

ಯಾವುದೇ ವಾಹನವನ್ನು ಟೋಯಿಂಗ್‌ ಮಾಡುವ ಮೊದಲು ಆ ವಾಹನದ ಸಂಖ್ಯೆಯನ್ನು ಮೂರು ಬಾರಿ ಮೈಕ್‌ನಲ್ಲಿ ಕೂಗುವ ಮೂಲಕ ವಾಹನದ ಮಾಲಿಕರಿಗೆ ಎಚ್ಚರಿಕೆ ಕೊಡಬೇಕು. ಮಾಲಿಕರು ಕೂಡಲೇ ಸ್ಥಳಕ್ಕೆ ಬಂದರೆ ಅಂತಹ ವಾಹನಗಳನ್ನು ಟೋಯಿಂಗ್‌ ಮಾಡುವಂತಿಲ್ಲ. ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದಕ್ಕೆ ದಂಡ ಹಾಕಬಹುದು ಎಂದು ಸೂಚನೆ ನೀಡಿದ್ದಾರೆ.