ಐಪಿಎಲ್ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ!

Be Careful While Bike Parking
Highlights

ಐಪಿಎಲ್ ಮ್ಯಾಚ್ ನೋಡಲು ಬೈಕ್ ಪಾರ್ಕಿಂಗ್ ಮಾಡಿ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಎಚ್ಚರ!  ಆರ್’ಸಿಬಿ  ಮ್ಯಾಚ್ ನೋಡಲು ಹೋದ್ರೆ ನಿಮ್ಮ ಬೈಕ್ ಮಂಗಮಾಯ ಆಗ್ತಾವೆ!

ಬೆಂಗಳೂರು (ಮೇ. 01):  ಐಪಿಎಲ್ ಮ್ಯಾಚ್ ನೋಡಲು ಬೈಕ್ ಪಾರ್ಕಿಂಗ್ ಮಾಡಿ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಎಚ್ಚರ!  ಆರ್’ಸಿಬಿ  ಮ್ಯಾಚ್ ನೋಡಲು ಹೋದ್ರೆ ನಿಮ್ಮ ಬೈಕ್ ಮಂಗಮಾಯ ಆಗ್ತಾವೆ!

ಬೆಂಗಳೂರು ಐಪಿಎಲ್ ಪ್ರಿಯರಿಗೆ ಶುರುವಾಗಿದೆ ಬೈಕ್ ಕಳ್ಳರ ಕಾಟ.  ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಬಂದ ಪ್ರೇಕ್ಷಕರ 15 ಬೈಕ್’ಗಳನ್ನ  ಕದ್ದು  ಖದೀಮರು ಎಸ್ಕೇಪ್ ಆಗಿದ್ದಾರೆ. ಕಬ್ಬನ್ ಪಾರ್ಕ್’ನಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಆರ್’ಸಿಬಿ ಮತ್ತು ಚೈನ್ನೈ ಮ್ಯಾಚ್ ನೋಡಲು ಹೋಗಿದ್ದ ವೇಳೆ ಕಳ್ಳರು ಬೈಕ್ ಕದ್ದಿದ್ದಾರೆ.   

ಕಳೆದ 3 ಪಂದ್ಯಾವಳಿಗಳು ಸೇರಿ ಒಟ್ಟು 15 ಬೈಕ್ ಗಳನ್ನ ಕದ್ದಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

loader