ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಾಯಿಕೊಡೆಗಳಂತೆ ಜಾಬ್ ಕನ್ಸಲ್ಟೆನ್ಸಿ ಕಚೇರಿಗಳು ತಲೆ ಎತ್ತಿದ್ದು, ನಿರೋದ್ಯೋಗಿಗಳಿಗೆ ವಂಚಿಸುವ ಜಾಲಗಳಾಗುತ್ತಿವೆ. 

ಸಾವಿರಾರು ರು.ನಷ್ಟು ಹಣವನ್ನು ಕಟ್ಟಿಸಿಕೊಂಡು ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ಮೋಸ ಮಾಡುತ್ತಿವೆ. 

ಇದೀಗ ಮಲ್ಲೇಶ್ವರಂನಲ್ಲಿರುವ  ಜಾಬ್ ಕನ್ಸಲ್ಟೆನ್ಸಿ ಕೆರಿಯರ್ ಗ್ರೋಥ್ ಟೆಕ್ನಾಲಜಿ ಏಜೆನ್ಸಿಯಿಂದ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.  ಯುವಕ ಯುವತಿಯರಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ  ಸಾವಿರಾರು ರು. ಕಟ್ಟಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.

ಕನ್ಸಲ್ಟೆನ್ಸಿಯಲ್ಲಿ ಹಣ ಕಟ್ಟಿದ್ದರೂ ಕೂಡ ಕೆಲಸ ಸಿಗದೇ ಯುವಕ ಯುವತಿಯರು ಪರದಾಡುತ್ತಿದ್ದು,  ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ದೂರು ನೀಡಿದರೂ ಕೂಡ ಪೊಲೀಸರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. 

ಇದೀಗ ಅತ್ತ ಕೆಲಸವೂ ಇಲ್ಲ ಇತ್ತ ಹಣವೂ ಇಲ್ಲದಂತಾಗಿ, ಇವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ.