ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದಿಲ್ಲೊಂದು ವಿವಾದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಲೆ ಇದೆ.ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ವಸತಿ ಸಮುಚ್ಛಯ ನಿರ್ಮಾಣ ಮಾಡಿದ ಅನುಭವ ಇಲ್ಲದ ಕಂಪನಿಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಲಾಗುವ ವಸತಿ ಸಮುಚ್ಛಯಗಳ ಉಳಿಕೆ ಕಾಮಗಾರಿ ಗುತ್ತಿಗೆ ನೀಡಿದೆ. ಅದೂ ಹೆಚ್ಚುವರಿ ಮೊತ್ತದ ಟೆಂಡರ್ ನೀಡಿದ್ದು, ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು (ಜೂ.20): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದಿಲ್ಲೊಂದು ವಿವಾದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಲೆ ಇದೆ.ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ವಸತಿ ಸಮುಚ್ಛಯ ನಿರ್ಮಾಣ ಮಾಡಿದ ಅನುಭವ ಇಲ್ಲದ ಕಂಪನಿಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಲಾಗುವ ವಸತಿ ಸಮುಚ್ಛಯಗಳ ಉಳಿಕೆ ಕಾಮಗಾರಿ ಗುತ್ತಿಗೆ ನೀಡಿದೆ. ಅದೂ ಹೆಚ್ಚುವರಿ ಮೊತ್ತದ ಟೆಂಡರ್ ನೀಡಿದ್ದು, ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ನಗರದ ವಿವಿಧ ಭಾಗದಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಂಚಿಕೆಯಾಗದೇ ಕೋಟಿ-ಕೋಟಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ.ಇದರ ನಡುವೆ ಮತ್ತೊಂದು ವಿವಾದಕ್ಕೆ ಗುರಿಯಾಗಿರುವ ಪ್ರಾಧಿಕಾರ ವಸತಿ ಸಮುಚ್ಚಯ
ನಿರ್ಮಾಣ ಮಾಡಿದ ಯಾವುದೇ ಅನುಭವ ಇಲ್ಲ. ಸಂಬಂಧಪಟ್ಟ ಪ್ರಾಧಿಕಾರ, ನಿಗಮಗಳಿಂದ ಪರವಾನಿಗೆ ಪತ್ರ ಕೂಡಾ ಈ ಸಂಸ್ಥೆಗೆ ದೊರೆತಿಲ್ಲ. ಇಂತಹ ಮೇವರಿಕ್ ಹೋಲ್ಡಿಂಗ್ಸ್ ಕಂಪನಿಗೆ ಬಿಡಿಎ ಟೆಂಡರ್ ನೀಡಿದೆ. ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿಯ ಗುಂಜೂರು ಗ್ರಾಮದಲ್ಲಿ ಆರ್ಥಿಕ ದುರ್ಬಲರಾಗಿರುವ ಕುಟುಂಬಕ್ಕೆ ಕಡಿಮೆ ದರದಲ್ಲಿ 1ಬಿಹೆಚ್ ಕೆ ವಸತಿ ಸಮುಚ್ಛಯ ನಿರ್ಮಾಣ ಮಾಡುತ್ತಿದೆ. 614 ಮನೆಗಳು ಮೊದಲ ಹಂತದ ನಿರ್ಮಾಣ ಆಗ್ತಿವೆ. ಶೇ 45% ಕಾಮಗಾರಿ ಪೂರ್ಣವಾಗಿದ್ದು, ಉಳಿಕೆ ಕಾಮಗಾರಿ ಟೆಂಡರ್ ಮೇವರಿಕ್ ಹೋಲ್ಡಿಂಗ್ಸ್ ಆಂಡ್ ಇನ್ವೆಸ್ಟ್ ಮೆಂಟ್ ಲಿ.44.45 ಕೋಟಿಗೆ ಬಿಡಿಎ ಗುತ್ತಿಗೆ ನೀಡಿದೆ. ಅದು ಶೇ. 23% ಹೆಚ್ಚುವರಿ ಗುತ್ತಿಗೆಯನ್ನು ಪ್ರಾಧಿಕಾರ ನೀಡಿದೆ.
ಇದರ ಜತೆಗೆ ಗುಂಜೂರು ಗ್ರಾಮದಲ್ಲೇ ಮಧ್ಯಮ ವರ್ಗದ ಕುಟುಂಬಕ್ಕಾಗಿ ಎರಡನೇ ಹಂತದ 2 ಹಾಗೂ 3 ಬಿಹೆಚ್ ಕೆ ವಸತಿ ಸಮುಚ್ಛಯಗಳು ನಿರ್ಮಾಣವಾಗುತ್ತಿವೆ.ಶೇ.80 %ರಷ್ಟು ಕಾಮಗಾರಿ ಪೂರ್ಣವಾಗಿದ್ದು, ಉಳಿಕೆ ಕಾಮಗಾರಿ ಗುತ್ತಿಗೆಯನ್ನು ಮೇವರಿಕ್ ಹೋಲ್ಡಿಂಗ್ಸ್ ಆಂಡ್ ಇನ್ವೆಸ್ಟ್ ಮೆಂಟ್ ಲಿ. 16.65 ಕೋಟಿ ಮೊತ್ತಕ್ಕೆ ನೀಡಲಾಗಿದೆ. ಇದು ಕೂಡಾ ಶೇ.19.86% ಹೆಚ್ಚುವರಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದ್ದು, 2017ರ ಏಪ್ರಿಲ್ ತಿಂಗಳಲ್ಲಿ ನಡೆದ ಪ್ರಾಧಿಕಾರದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಪ್ರಾಧಿಕಾರದ ಈ ನಡೆ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
