Asianet Suvarna News Asianet Suvarna News

ಸುರಕ್ಷಾ ಆ್ಯಪ್‌’ಗೆ ನಗರದ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ

ಬೆಂಗಳೂರು ಪೊಲೀಸರು ಅಭಿವೃದ್ಧಿಪಡಿಸಿರುವ ಸುರಕ್ಷಾ ಆ್ಯಪ್‌’ಗೆ ಕಳೆದ ಏ.10ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈವರೆಗೆ ಆ ಆ್ಯಪನ್ನು  ಸುಮಾರು 26 ಸಾವಿರ ಮಂದಿ ಡೌನ್’ಲೋಡ್ ಮಾಡಿದ್ದಾರೆಂದು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಹೇಳಿದ್ದಾರೆ.

BCP Suraksha App Gets Good Response from City Women

ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ಸುರಕ್ಷಾ ಮೊಬೈಲ್ ಆ್ಯಪ್‌’ಗೆ ನಗರದ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಬೆಂಗಳೂರು ಪೊಲೀಸರು ಅಭಿವೃದ್ಧಿಪಡಿಸಿರುವ ಸುರಕ್ಷಾ ಆ್ಯಪ್‌’ಗೆ ಕಳೆದ ಏ.10ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈವರೆಗೆ ಆ ಆ್ಯಪನ್ನು  ಸುಮಾರು 26 ಸಾವಿರ ಮಂದಿ ಡೌನ್’ಲೋಡ್ ಮಾಡಿದ್ದಾರೆಂದು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಹೇಳಿದ್ದಾರೆ.

BCP Suraksha App Gets Good Response from City Women

ಮಹಿಳೆಯರು ಯಾವುದಾದರು ಸಮಸ್ಯೆಯಲ್ಲಿದ್ದಾಗ ಸುರಕ್ಷಾ ಆ್ಯಪ್‌’ನಲ್ಲಿರುವ SOS ಗುಂಡಿಯನ್ನು ಒತ್ತಿದರೆ ಸಾಕು,  ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಇತರ ಕಾಂಟಾಕ್ಟ್'ಗಳಿಗೆ ಸಂದೇಶ ರವಾನೆಯಾಗುತ್ತದೆ ಹಾಗೂ ಮಹಿಳೆಯ ಇರುವ ಸ್ಥಳವು ಕೂಡಾ ಆ್ಯಪ್‌ ಮೂಲಕ ಅವರಿಗೆ ತಿಳಿಯುತ್ತದೆ. ಇದರಾಧಾರದಲ್ಲಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗುರತ್ತಾರೆ.

BCP Suraksha App Gets Good Response from City Women

ಆದರೆ ತುರ್ತುಸಂದರ್ಭಕ್ಕಾಗಿ ವಿನ್ಯಾಸಗೊಳಿಸಲಾಗಿರುವ ನಮ್ಮ 100 ಆ್ಯಪ್‌’ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ದೊರಕಿದೆ. ಈವರೆಗೆ ಕೇವಲ 700 ಮಂದಿ ಈ ಆ್ಯಪನ್ನು ಡೌನ್’ಲೋಡ್ ಮಾಡಿದ್ದಾರೆ.

ಅದೇ ರೀತಿ, ಠಾಣಾ ಸರಹದ್ದಿನ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಬಿಡುಗಡೆ ಮಾಡಲಾದ ‘Know Your Police Station’ ಆ್ಯಪ್‌’ಗೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರೆಗೆ ಸುಮಾರು 5000 ಮಂದಿ ಈ ಆ್ಯಪನ್ನು ತಮ್ಮ ಮೊಬೈಲ್’ಗಳಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios