ಬಿಸಿಸಿಐ'ನ ಸಿಇಒ ರಾಹುಲ್ ಜೊಹ್ರಿ ಹಾಗೂ ಒಪ್ಪೊ ಮೊಬೈಲ್ ಅಧ್ಯಕ್ಷ ಸ್ಕೈ ಲೀ ಮುಂಬೈ'ನಲ್ಲಿ ಜರ್ಸಿಯನ್ನು ಅನಾವರಣಗೊಳಿಸಿದರು.

ಮುಂಬೈ(ಮೇ.05): ಇಂಗ್ಲೆಂಡ್'ನಲ್ಲಿ 2017ರ ಜೂನ್'1-18ರವರೆಗೆ ನಡೆಯುವ ಚಾಂಪಿಯನ್ಸ್ ಟ್ರೋಪಿಯಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ನೂತನ ಜರ್ಸಿ'ಯನ್ನು ಬಿಡುಗಡೆ ಮಾಡಲಾಗಿದೆ.ಹೊಸ ಜರ್ಸಿಯು ಪ್ರಾಯೋಜಕತ್ವ ಪಡೆದಿರುವ ಒಪ್ಪೊ ಮೊಬೈಲ್ ಇಂಡಿಯಾ ಲೋಗೊವನ್ನು ಹೊಂದಿದೆ.

ಬಿಸಿಸಿಐ'ನ ಸಿಇಒ ರಾಹುಲ್ ಜೊಹ್ರಿ ಹಾಗೂ ಒಪ್ಪೊ ಮೊಬೈಲ್ ಅಧ್ಯಕ್ಷ ಸ್ಕೈ ಲೀ ಮುಂಬೈ'ನಲ್ಲಿ ಜರ್ಸಿಯನ್ನು ಅನಾವರಣಗೊಳಿಸಿದರು. 1,079 ಕೋಟಿ ರೂ.ಗಳೊಂದಿಗೆ ಬಿಸಿಸಿಐ'ನೊಂದಿಗೆ 5 ವರ್ಷಗಳವರೆಗೆ ಒಪ್ಪೊ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆಯು ಐಸಿಸಿ ಆಯೋಜಿಸುವ ಪ್ರತಿ ಪಂದ್ಯಕ್ಕೆ 1,56 ಕೋಟಿ ರೂ. ಹಾಗೂ ಭಾರತ ತಂಡ ಆಡುವ ಪಂದ್ಯಕ್ಕೆ 4.61 ಕೋಟಿ ರೂ. ನೀಡಲಿದೆ. ಜರ್ಸಿಯು ನೀಲಿ ಬಣ್ಣವನ್ನು ಒಳಗೊಂಡಿದೆ.