ಮುಂಬೈ(ಜು.23): ವಿಶ್ವಕಪ್ ಫೈನಲ್ ತಲುಪಿದ ಮಿಥಾಲಿ ನೇತೃತ್ವದ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಬಂಪರ್ ಗಿಫ್ಟ್ ನೀಡಿದೆ. ಟೂರ್ನಿಯಲ್ಲಿ  ತಂಡದ ಪ್ರತಿಯೊಬ್ಬ ಸದಸ್ಯರಿಗೂ 50 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ. ಅಲ್ಲದೆ ತಂಡಕ್ಕೆ ಬೆಂಬಲವಾಗಿ ನಿಂತ ಪ್ರತಿ ಸಿಬ್ಬಂದಿಗೂ 25 ಲಕ್ಷ ರೂ.ನೀಡಲಾಗಿದೆ.

ಗುರುವಾರ ಇಂಗ್ಲೆಂಡ್'ನ ಡರ್ಬಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು ಆಸ್ಟ್ರೇಲಿಯಾ ತಂಡವನ್ನು 36 ರನ್ನುಗಳಿಂದ ಮಣಿಸಿ ಫೈನಲ್ ತಲುಪಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರ್ತಿ ಹರ್ಮ'ನ್'ಪ್ರೀತ್ ಕೌರ್  ಅವರು ಭರ್ಜರಿ 171 ರನ್ ಗಳಿಸಿದ್ದರು. ಇದಕ್ಕೂ ಮುನ್ನ ನಡೆದ ಲೀಗ್ ಪಂದ್ಯಗಳಲ್ಲಿ ಭಾರತ ತಂದ ಸತತ 4 ಪಂದ್ಯಗಳನ್ನು ಗೆದ್ದುಕೊಂಡಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಮಿಥಾಲಿ ಪಡೆ ಅಮೋಘ ಗೆಲುವನ್ನು ಸಾಧಿಸಿತ್ತು.

ಈ ಪಂದ್ಯದಲ್ಲಿ ಕನ್ನಡತಿ ರಾಜೇಶ್ವರಿ 5 ವಿಕೇಟ್ ಪಡೆದು ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯ ಎಲ್ಲ ಪಂದ್ಯಗಳಲ್ಲಿಯೂ ಮತ್ತೊಬ್ಬಳು ಕನ್ನಡತಿ ವೇದಾ ಕೃಷ್ಣಮೂರ್ತಿ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ಫೈನಲ್ ಪಂದ್ಯ ಜು.23ರಂದು ಭಾನುವಾರ ಅತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಲಿದೆ.