ತನ್ನ ಮೇಲಿದ್ದ ಜೀವಾವಧಿ ನಿಷೇಧವನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ಮುಂದಾಗಿರುವ ಬಿಸಿಸಿಐ ವಿರುದ್ಧ ಕ್ರಿಕೆಟಿಗ ಶ್ರೀಶಾಂತ್ ಕೆಂಡಾಮಂಡಲವಾಗಿದ್ದಾರೆ. ನಾನು ಭಿಕ್ಷೆ ಬೇಡುತ್ತಿಲ್ಲ, ನಾನು ನನ್ನ ಜೀವನೋಪಾಯವನ್ನು ವಾಪಾಸು ಕೇಳುತಿದ್ದೇನೆ. ಅದು ನನ್ನ ಹಕ್ಕು. ನಾನು ಇನ್ನೊಮ್ಮೆ ಆಡಿಯೇ ತೀರುತ್ತೇನೆ, ಎಂದು ಶ್ರೀಶಾಂತ್ ಟ್ವೀಟಿಸಿದ್ದಾರೆ.
ನವದೆಹಲಿ: ತನ್ನ ಮೇಲಿದ್ದ ಜೀವಾವಧಿ ನಿಷೇಧವನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ಮುಂದಾಗಿರುವ ಬಿಸಿಸಿಐ ವಿರುದ್ಧ ಕ್ರಿಕೆಟಿಗ ಶ್ರೀಶಾಂತ್ ಕೆಂಡಾಮಂಡಲವಾಗಿದ್ದಾರೆ.
ನಾನು ಭಿಕ್ಷೆ ಬೇಡುತ್ತಿಲ್ಲ, ನಾನು ನನ್ನ ಜೀವನೋಪಾಯವನ್ನು ವಾಪಾಸು ಕೇಳುತಿದ್ದೇನೆ. ಅದು ನನ್ನ ಹಕ್ಕು. ನಾನು ಇನ್ನೊಮ್ಮೆ ಆಡಿಯೇ ತೀರುತ್ತೇನೆ, ಎಂದು ಶ್ರೀಶಾಂತ್ ಟ್ವೀಟಿಸಿದ್ದಾರೆ.
ಒಬ್ಬ ಸತತವಾಗಿ ನಿರಾಪರಾಧಿ ಎಂದು ಸಾಬೀತಾದ ಬಳಿಕವೂ ಅತನ ವಿರುದ್ಧ ಕೀಳು ಕ್ರಮ ಕೈಗೊಳ್ಳುತ್ತೀದ್ದೀರಿ. ನೀವ್ಯಾಕೆ ಹೀಗೆ ಮಾಡುತ್ತಿದ್ದೀರೋ? ಎಂದು ಅವರು ಹೇಳಿದ್ದಾರೆ.
2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್’ನಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐಯು ಶ್ರೀಶಾಂತ್’ಗೆ ಜೀವಾವಧಿ ನಿಷೇಧವನ್ನು ಹೇರಿತ್ತು. ಆ ನಿಷೇಧವನ್ನು ರದ್ದುಗೊಳಿಸಿ ಕೇರಳ ಹೈಕೋರ್ಟ್’ನ ಏಕ-ಸದಸ್ಯ ಪೀಠವು ತೀರ್ಪು ನೀಡಿತ್ತು.
