ಕಪ್ಪುಪಟ್ಟಿ ಸೀರೆ ಧರಿಸಿ ಕೌನ್ಸಿಲರ್ ಸಭೆಗೆ ಹಾಜರಾದ ಮಂಜುಳಾ ನಾರಾಯಣಸ್ವಾಮಿ ಪರ ಕಾಂಗ್ರೆಸ್ ಸದಸ್ಯೆ ಆಶಾ, ಬಿಜೆಪಿ ಸದಸ್ಯೆ ಮಮತಾ ಬ್ಯಾಟಿಂಗ್ ಮಾಡಿದರು. ಇದಕ್ಕೂ ಮೊದಲು ಪಾಲಿಕೆ ಸದಸ್ಯರು ಹಾಗೂ ಮೇಯರ್​ಗಳ ಮಧ್ಯೆ ಮಾತಿನ ಚಕಮಕಿ ನಡೀತು.

ಬೆಂಗಳೂರು(ಮೇ.29): ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇಂದು ಹೈಡ್ರಾಮಾ ನಡೆದಿದೆ. ಶಾಸಕ ಮುನಿರತ್ನ ಬೆಂಬಲಿಗರ ದೌರ್ಜನ್ಯ ಖಂಡಿಸಿ ಮಹಿಳಾ ಕಾರ್ಪೊರೇಟರ್​ಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಿಬಿಎಂಪಿ ಸದಸ್ಯರಾದ ಆಶಾ, ಮಮತಾ ಹಾಗೂ ಮಂಜುಳಾ ಫಿನಾಯಿಲ್​ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌನ್ಸಿಲ್​ ಸಭೆ ಆರಂಭ ಆಗುತ್ತಿದ್ದಂತೆ ಮುನಿರತ್ನ ಬೆಂಬಲಿಗರ ದೌರ್ಜನ್ಯ ವಿಷಯ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮೂವರು ಮಹಿಳಾ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿ ಮುನಿರತ್ನ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದರು.

ಕಪ್ಪುಪಟ್ಟಿ ಸೀರೆ ಧರಿಸಿ ಕೌನ್ಸಿಲರ್ ಸಭೆಗೆ ಹಾಜರಾದ ಮಂಜುಳಾ ನಾರಾಯಣಸ್ವಾಮಿ ಪರ ಕಾಂಗ್ರೆಸ್ ಸದಸ್ಯೆ ಆಶಾ, ಬಿಜೆಪಿ ಸದಸ್ಯೆ ಮಮತಾ ಬ್ಯಾಟಿಂಗ್ ಮಾಡಿದರು. ಇದಕ್ಕೂ ಮೊದಲು ಪಾಲಿಕೆ ಸದಸ್ಯರು ಹಾಗೂ ಮೇಯರ್​ಗಳ ಮಧ್ಯೆ ಮಾತಿನ ಚಕಮಕಿ ನಡೀತು. ಇದೇ ವೇಳೆ ಜೆಡಿಎಸ್ ಶಾಸಕ ಗೋಪಾಲಯ್ಯ, ಅಧಿಕಾರ ಇದೆ ಅಂತ ಎಷ್ಟು ಬೇಕಾದ್ರೂ ಪ್ರಕರಣ ಹಾಕಬಹುದಾ? ನಮ್ಮ ಸದಸ್ಯರ ಮೇಲೆ ದೌರ್ಜನ್ಯ ಎಸಗೋದು ನಿಮ್ಮ ಸಂಸ್ಕೃತೀನಾ ಅಂತ ಪ್ರಶ್ನೆ ಮಾಡಿದರು. ಈ ಮಾತಿಗೆ ಗರಂ ಆದ ಮೇಯರ್ ಪದ್ಮಾವತಿ, ಗೌರವದಿಂದ ಮಾತನಾಡಿ, ನಿಮ್ಮ ಮಾತು ವಾಪಸ್ ಪಡೆಯಿರಿ ಅಂತ ಖಾರವಾಗಿ ಪ್ರತಿಕ್ರಿಯಿಸಿದರು.