ಬೆಂಗಳೂರು (ಸೆ.30): ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ಸ್ಥಾನಗಳನ್ನು ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ಸಮಾನವಾಗಿ ಹಂಚಿಕೆಕೊಳ್ಳಲು ನಿರ್ಧರಿಸಿದ್ದಾರೆ. ಆ ಪ್ರಕಾರ ಕಾಂಗ್ರೆಸ್, ಜೆಡಿಎಸ್, ಹಾಗೂ ಪಕ್ಷೇತರರಿಗೆ ತಲಾ 4 ಸ್ಥಾಯಿ ಸಮಿತಿಗಳು ಸಿಗಲಿವೆ.

ಸಮಿತಿ ಅಧ್ಯಕ್ಷರು ಹಾಗೂ 11 ಸದಸ್ಯರ ಸ್ಥಾನಕ್ಕೆ ಅ.6 ರಂದು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ.

ಉನ್ನತ ಮೂಲಗಳಿಂದ ಸುವರ್ಣ ನ್ಯೂಸ್ ಗೆ ಲಭಿಸಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ತೆಕ್ಕೆಗೆ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ, ಸಿಬ್ಬಂದಿ ಮತ್ತು ಆಡಳಿತ ಸ್ಥಾಯಿ ಸಮಿತಿ, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ಹಾಗೂ

ತೋಟಗಾರಿಕೆ ಸ್ಥಾಯಿ ಸಮಿತಿ ಬಂದಿದೆ.

ಜೆಡಿಎಸ್’ಗೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ವಾರ್ಡ್ ಮಟ್ಟದ ಸಾರ್ವಜನಿಕ ಸ್ಥಾಯಿ ಸಮಿತಿ,

ಲೆಕ್ಕಪತ್ರ ಸ್ಥಾಯಿ ಸಮಿತಿ, ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಲಭಿಸಿದೆ.

ಪಕ್ಷೇತರರಿಗೆ ಸಾಮಾಜಿಕ.ನ್ಯಾಯ ಸ್ಥಾಯಿ ಸಮಿತಿ, ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ,ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿಸಿಗಲಿದೆ.