ಬಿಬಿಎಂಪಿ ಚುನಾವಣೆ ಸೆ.28ಕ್ಕೆ
ಬೆಂಗಳೂರು(ಸೆ.09): ಬಿಬಿಎಂಪಿ 51ನೇ ಮೇಯರ್ ಮತ್ತು 50ನೇ ಉಪಮೇಯರ್ ಚುನಾವಣೆ ಸೆ.28 ರಂದು ನಡೆಯಲಿದೆ.ಅಂದು ಕೇವಲ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ.12 ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ನತ್ತು ಸದಸ್ಯರ ಅವಧಿ ಮುಂದಿನ ತಿಂಗಳು ಅಕ್ಟೋಬರ್ ನಲ್ಲಿ ಮುಗಿಯಲಿದೆ. ಹಾಗಾಗಿ ಮತ್ತೊಂದು ದಿನ ಆ ಸ್ಥಾನಗಳಿಗೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿ'ಗಳಿಗೆ ಸೂಚಿಸಿದ್ದಾರೆ. ಸೆ.28ರ ಬೆಳಗ್ಗೆ 11:30ಕ್ಕೆ ಚುನಾವಣೆ ನಿಗದಿ ಮಾಡಲಾಗಿದೆ
Click Here:ಮೇಯರ್ ಗಾದಿ ಪರಿಶಿಷ್ಟ ಜಾತಿಗೆ, ಉಪಮೇಯರ್ ಸ್ಥಾನ ಮಹಿಳೆಗೆ
