ಆಶ್ರಯ ಮನೆಗಳ ಬಿಲ್ ಬೇಕಂದ್ರೆ ಮಂಚಕ್ಕೆ ಕರಿತಾರೆ ಅಧಿಕಾರಿಗಳು; ಕ್ರಮ ಕೖಗೊಳ್ಳಬೇಕಾದ ಶಾಸಕರಿಂದಲೇ ಕುಮ್ಮಕ್ಕು

First Published 1, Mar 2018, 3:24 PM IST
BBMP laggere ward Irregularities
Highlights

ಬಿಬಿಎಂಪಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿಯೇ ಇರುತ್ತದೆ. ಇದೀಗ ಲಗ್ಗೆರೆ ವಾರ್ಡ್’ನಲ್ಲಿ ಅವ್ಯವಹಾರ ಬಯಲಿಗೆ ಬಂದಿದೆ.  ಸದಸ್ಯರಿಗೆ ಗೊತ್ತಿಲ್ಲದಂತೆ ಅಧಿಕಾರಿಗಳು ಲಕ್ಷ ಲಕ್ಷ ವಸೂಲಿಗಿಳಿದಿದ್ದಾರೆ.  ಆಶ್ರಯ ಮನೆಗಳ ಬಿಲ್’ಗೆ ಮಹಿಳೆಯರಿಗೆ ಅಶ್ಲೀಲ ಪದ ಬಳಕೆ ಮಾಡಿ ಮಾತಾಡುತ್ತಿದ್ದು, ಅಧಿಕಾರಿಗಳಿಂದ ವಾರ್ಡ್’ನಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.  

ಬೆಂಗಳೂರು (ಮಾ. 01): ಬಿಬಿಎಂಪಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿಯೇ ಇರುತ್ತದೆ. ಇದೀಗ ಲಗ್ಗೆರೆ ವಾರ್ಡ್’ನಲ್ಲಿ ಅವ್ಯವಹಾರ ಬಯಲಿಗೆ ಬಂದಿದೆ.  ಸದಸ್ಯರಿಗೆ ಗೊತ್ತಿಲ್ಲದಂತೆ ಅಧಿಕಾರಿಗಳು ಲಕ್ಷ ಲಕ್ಷ ವಸೂಲಿಗಿಳಿದಿದ್ದಾರೆ.  ಆಶ್ರಯ ಮನೆಗಳ ಬಿಲ್’ಗೆ ಮಹಿಳೆಯರಿಗೆ ಅಶ್ಲೀಲ ಪದ ಬಳಕೆ ಮಾಡಿ ಮಾತಾಡುತ್ತಿದ್ದು, ಅಧಿಕಾರಿಗಳಿಂದ ವಾರ್ಡ್’ನಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.  
ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ಸಿಡಿ ಮತ್ತು ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದರು.  ಲಗ್ಗೆರೆ ವಾರ್ಡ್’ನಲ್ಲಿ ಅಧಿಕಾರಿಗಳ ದರ್ಪ ಮಿತಿ ಮೀರಿದೆ. ಇಲ್ಲಿ ಪಾಲಿಕೆ ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆಲ್ಲ ಪ್ರಭಾವಿ ಶಾಸಕರ ಕುಮ್ಮಕ್ಕಿದೆ. ಮನೆಗಳ ಬಿಲ್ ಮಾಡುವುದಕ್ಕೆ ಕೇಸ್ ವರ್ಕರ್ ಚಂದ್ರು ಎಂಬುವರು ಮಹಿಳೆಯರಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಇನ್ನು ಒಎಫ್’ಸಿ ಕೇಬಲ್ ಹಾಕಲು ಎಇಇ ಬಸವರಾಜ್ ಮತ್ತು  ಎಇ ಅಶ್ವತ್ಥ್  ಎಂಬುವರು ಕಾರ್ಪೋರೇಟರ್ ಹೆಸರಿನಲ್ಲಿಯೇ ಲಕ್ಷಾನುಗಟ್ಟಲೇ ವಸೂಲಿಗೆ ಇಳಿದ್ದಾರೆ. ಈ ಮೂಲಕ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಜೆಸಿ ಮತ್ತು ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮಹಿಳಾ ಆಯೋಗ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.  

loader